ಬುದ್ಧ ಪರಂಪರೆಗೆ ಪರ್ಯಾಯ ಶಕ್ತಿ ಮತ್ತೊಂದಿಲ್ಲ

D.6-MDG-1P1
ಮೂಡಿಗೆರೆಯ ಪ್ರಮುಖ ಬೀದಿಗಳಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು.
Published on

ಮೂಡಿಗೆರೆ: ಭಾರತಕ್ಕೆ ವಿದೇಶದಿಂದ ವಲಸೆ ಬಂದವರ ಗುಂಪು ಸನಾತನದ ಹೆಸರಿನಲ್ಲಿ ಇಲ್ಲಿನ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಅವರ ಜಮೀನುಗಳನ್ನು ಕಬಳಿಸಿ ಜಾತಿ, ವರ್ಣ, ಲಿಂಗ ತಾರತಮ್ಯದ ಮೂಲಕ ಅಸಮಾನತೆ ಸೃಷ್ಟಿಸಿದ್ದಾರೆ. ಜಾತಿ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವ ಸನಾತನಿಗಳ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಅಗತ್ಯವಿದೆ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಇದ್ದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿಂಧು ನಾಗರಿಕತೆಯ ಆರ್ಯರು ಭಾರತಕ್ಕೆ ಬಂದು ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಆರಂಭದಿಂದ ಇದುವರೆಗೂ ಮೂಲ ನಿವಾಸಿಗಳನ್ನು ದೂರಮಾಡಿ ಅಧಿಕಾರದ ಗದ್ದುಗೆ ಏರಿದ್ದಾರೆ. ಅವರಿಗೆ ದಾರಿ ಬಿಟ್ಟು ಮೂಲ ನಿವಾಸಿಗಳು ಬದಿಗೆ ಸರಿದಿರುವುದು ಸರಿಯಲ್ಲ ಎಂದರು.
ಸಂಜೆ 5 ರಿಂದ ರಾತ್ರಿ 8 ರವರೆಗೆ ಪಟ್ಟಣದ ವಿವಿಧ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಮಾಜಿ ಸಚಿವರಾದ ಮೋಟಮ್ಮ, ಬಿ,ಬಿ ನಿಂಗಯ್ಯ, ಸುಂದರೇಶ್, ಸುರೇಶ್ ಹುಲ್ಲೆಮನೆ, ಕಿರಣ್ ಹೆಸಗಲ್, ಬಿ.ರುದ್ರಯ್ಯ, ಎಲ್.ಬಿ.ರಮೇಶ್, ಬಿ.ಎಂ ಶಂಕರ್ ಪಿಕೆ ಮಂಜುನಾಥ್, ಶ್ರೀಕಾಂತ್, ಎಂ.ಎಸ್.ಅನಂತ ಅಂಗಡಿ ಚಂದ್ರು. ಸಿ.ಕೆ.ಇಬ್ರಾಹಿಂ, ಮಂಜುನಾಥ ಚಲವಾದಿ, ಬಿ.ಎಚ್.ಮಹಮ್ಮದ್, ಗಿರೀಶ್ ಹೆ, ಜಕರಿಯ ಜಾಕೀರ್, ಎಚ್ಪಿ ರಮೇಶ್ ಹರೀಶ್ ನಳ್ಳಿಕೆ ಫಿಶ್ ಮೋಣು. ಕೆ.ಸಿ.ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net