

ದೊಡ್ಡಬಳ್ಳಾಪುರ: ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀೆ ಹಮ್ಮಿಕೊಂಡಿದೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಣತಿದಾರರಿಗೆ ನೀಡಬೇಕಿದ್ದ ಎರಡು ತರಬೇತಿಗಳಲ್ಲಿ ಕೇವಲ ಒಂದನ್ನು ನೀಡಿ ಸಮೀೆ ಮಾಡಿಸಲು ಮುಂದಾಗಿದೆ. ಅಲ್ಲದೆ ತಾಲೂಕಿನ ಶಿಕ್ಷಕರನ್ನು ಸಮೀೆಗೆ ಅವೈಜ್ಞಾನಿಕವಾಗಿ ನೇಮಿಸಿದೆ ಎಂದು ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ರಾಜಶೇಖರ್ ಆಕ್ಷೇಪ ವ್ಯಕ್ತಪಡಿಸಿದರು.
ಸಮೀೆಯ ಬಗ್ಗೆ ಶಿಕ್ಷಕರಿಗೆ ಉಂಟಾಗಿರುವ ಗೊಂದಲ, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಬುಧವಾರ ತಾಲೂಕಿನ ಶಿಕ್ಷಕರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದರು. ಸಮೀೆ ಆರಂಭವಾಗಿದೆ. ಆದರೆ ಗಣತಿ ಮಾಡುವ ಶಿಕ್ಷಕರಿಗೆ ಹಲವು ಗೊಂದಲವಿದೆ. ಗಣತಿಗಾಗಿ ಗ್ರಾಮೀಣ ಭಾಗದ ಶಿಕ್ಷಕರನ್ನು ನಗರ ಭಾಗಕ್ಕೆ ನೇಮಿಸಲಾಗಿದೆ. ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಶಾಲೆಗಳಿಂದ ಬಂದು ಸಮೀೆ ನಡೆಸುವುದು ಕಷ್ಟ. ಹಿಂದುಳಿದ ವರ್ಗದ ಇಲಾಖೆ ಶಿಕ್ಷಕರಿಗೆ ಎರಡರಲ್ಲಿ ಒಂದು ತರಬೇತಿ ನೀಡಿದ್ದಾರೆ. ಜತೆಗೆ ಕೆಲ ಗರ್ಭಿಣಿ ಶಿಕ್ಷಕಿಯರನ್ನೂ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರನ್ನೂ ಸಮೀೆಗೆ ನೇಮಿಸಲಾಗಿದೆ. ಪ್ರಮುಖವಾಗಿ ತಾಲೂಕಿನ ಶಿಕ್ಷಕರಿಗೆ ಸಮೀೆ ಮಾಡುವ ಗಣತಿಯ ಪಟ್ಟಿಯನ್ನು ನೀಡಿಲ್ಲ ಎಂದರು. ತಾಲೂಕಿನ ಶಿಕ್ಷಕರಿಗೆ ಸಮೀೆ ಬಗ್ಗೆ ಉಂಟಾಗಿರುವ ಸಮಸ್ಯೆ, ಗೊಂದಲ ನಿವಾರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಲಾಯಿತು.