

ಚಳ್ಳಕೆರೆ: ಅಂಗನವಾಡಿ ವ್ಯವಸ್ಥೆಗೆ ವಿರುದ್ಧವಾಗಿ ಶಿಶುಪಾಲನಾ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸುವ ಸರ್ಕಾರ ನಡೆ ಸರಿಯಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದರು.
ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಮುಖಂಡರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಪಿ.ಪದ್ಮಾ, ಪಿ.ತಿಪ್ಪೇರುದ್ರಪ್ಪ, ಎಂ.ಪದ್ಮಕ್ಕ, ಎಚ್. ಲಕ್ಷ್ಮೀ, ಒ.ವೀಣಾ, ಎಚ್.ಸಾವಿತ್ರಮ್ಮ, ಲೀಲಾ, ನಾಗವೇಣಿ, ಮುಜೀನಾ ಬಾನು, ಓಬಮ್ಮ, ಸಿ.ವಿಮಲಾಕ್ಷಿ ಇದ್ದರು.