

ಬಾಳೆಹೊನ್ನೂರು: ಕಳೆದ ಕೆಲ ದಿನಗಳಿಂದ ಜೋರಾಗಿರುವ ಮಳೆ ಅಬ್ಬರದಿಂದ ಬನ್ನೂರು ಗ್ರಾಪಂ ವ್ಯಾಪ್ತಿಯ ಜಕ್ಕಣಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಧರೆ ಕುಸಿದಿದ್ದು, ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಜಕ್ಕಣಕ್ಕಿ ಗ್ರಾಮದ ಸಂಪರ್ಕ ಕಲ್ಪಿಸಲು ಇರುವ ರಸ್ತೆ ಸಮೀಪದಲ್ಲಿರುವ ಹಳ್ಳದ ನೀರು ಇತ್ತೀಚೆಗೆ ಸುರಿದ ಮಳೆಯಿಂದ ವ್ಯಾಪಕವಾಗಿ ಹರಿದ ಪರಿಣಾಮ ಧರೆ ಕುಸಿತಗೊಂಡಿದ್ದು, ದಿನದಿಂದ ದಿನಕ್ಕೆ ಕುಸಿತ ಹೆಚ್ಚಾಗುತ್ತಿದೆ. ಮಳೆ ಹೆಚ್ಚಾಗಿ ಮತ್ತೆ ಧರೆ ಕುಸಿದರೆ ಜಕ್ಕಣಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಈ ಗ್ರಾಮದಲ್ಲಿ ಸುಮಾರು 15 ಮನೆಗಳಿದ್ದು, ಮೂರು ಖಾಸಗಿ ಎಸ್ಟೇಟ್‌ನ ಕಾರ್ಮಿಕರ ಲೈನ್‌ಗಳಿಗೆ ದಾರಿ ಇಲ್ಲವಾಗಲಿದೆ.
ಧರೆ ಕುಸಿತಗೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.