ಒಕ್ಕಣೆ ಸಮಯದಲ್ಲಿ ಜಿನುಗು ಮಳೆ ಭೀತಿ

27 LXR 5
Published on

ಲಕ್ಷ್ಮೇಶ್ವರ: ಎರಡ್ಮೂರು ದಿನದಿಂದ ಸುರಿಯುತ್ತಿರುವ ಸಣ್ಣ ಮಳೆ ಹಾಗೂ ಮೋಡಕವಿದ ವಾತಾವರಣದಿಂದ ರೈತ ಸಮುದಾಯ ಆತಂಕ್ಕೀಡಾಗಿದೆ. ಹಿಂಗಾರಿನಲ್ಲಿ ಕಡಲೆ, ಜೋಳ, ಕುಸುಬೆ, ಗೋಧಿ ಬೆಳೆ ಸಮೃದ್ಧವಾಗಿಯೇ ಬೆಳೆದಿವೆ. ಅಕಾಲಿಕ ಮಳೆ, ಫೆಂಗಲ್ ಚಂಡ ಮಾರುತದಿಂದ ಕಡಲೆಗೆ ಸೊರಗು, ಸಿಡಿ ರೋಗ ಮತ್ತು ಇತರ ಕೀಟಬಾಧೆ ತಗುಲಿದೆ. ಬೆಳೆ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಿಸುತ್ತಿದ್ದಾರೆ. ಕಳೆದ ಎರಡು ದಿನದಿಂದ ಮೋಡಕವಿದ ವಾತಾವರಣ, ಜಿನುಗು ಮಳೆ ರೈತರಿಗೆ ಆತಂಕ ತಂದೊಡ್ಡಿದೆ. ವಾತಾವರಣದಲ್ಲಿನ ಏರುಪೇರು ಪರಿಸ್ಥಿತಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೆಣಸಿನಕಾಯಿಯನ್ನು ರೈತರು ಜಮೀನಿನಲ್ಲಿ ಒಣಹಾಕಿದ್ದಾರೆ, ಶೇಂಗಾ, ಹತ್ತಿ, ಹುರುಳಿ, ಮಡಕೆ, ಗೋವಿನಜೋಳ ಒಕ್ಕಲಿ ಮಾಡುತ್ತಿದ್ದಾರೆ. ಶುಕ್ರವಾರ ಇಡೀ ದಿನ ಮೋಡಕವಿದ ವಾತಾವರಣ ಮತ್ತು ಸಂಜೆ 4ಗಂಟೆಯಿಂದ ಜಿನುಗು ಮಳೆಯಾಯಿತು. ಅಕಾಲಿಕ ಮಳೆಯಿಂದ ಮೆಣಸಿನಕಾಯಿ, ಶೇಂಗಾ, ಕಡಲೆ ಬೆಳೆ ಮತ್ತು ಹೊಟ್ಟು ಮೇವು ಹಾಳಾಗುತ್ತದೆ ಎನ್ನುತ್ತಾರೆ ರೈತರಾದ ಪ್ರಕಾಶ ಜಾವೂರ, ರಾಜಣ್ಣ ಹವಳದ, ಸುರೇಶ ಲಮಾಣಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net