ಶಾಲೆಗೆ ಮೀಸಲಿಟ್ಟ ಜಾಗ ಕಬಳಿಸಲು ಹುನ್ನಾರ

IMG_20231020_105052
Published on

ರಾಯಚೂರು: ನಗರದ ಎಲ್‌ಬಿಎಸ್ ನಗರದ ಸರ್ವೇ 384/1ರಲ್ಲಿನ ವಸತಿ ಬಡಾವಣೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟ ನಿವೇಶನವನ್ನು ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಎಸ್‌ಎ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಆರೋಪಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಒಂದು ವಾರದೊಳಗೆ ನಿವೇಶನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನಡೆಯುತ್ತಿರುವ ಪ್ರಕ್ರಿಯೆಯನ್ನು ತಡೆದು ಶಾಲಾ ನಿರ್ಮಾಣಕ್ಕೆ ಹಸ್ತಾಂತರಿಸದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಸಿಎ ನಿವೇಶವನ್ನು ನಗರಾಭಿವೃದ್ಧಿ ಪ್ರಾಕಾರಿ ಶಿಕ್ಷಣ ಇಲಾಖೆ ಮಂಜೂರಾತಿ ನೀಡಿದೆ. ನಿವೇಶನದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಅನುದಾನವ್ನ ಮಂಜೂರು ಮಾಡಲಾಗಿದೆ. ಆದರೆ ಬಡಾವಣೆಯ ಕೆಲವು ಪ್ರಭಾವಿಗಳು ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆಗೂ ಮುಂದಾಗಿದ್ದು, ಅದನ್ನು ತಡೆಯುವ ಮೂಲಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಜನಪ್ರತಿನಿಗಳು, ಅಕಾರಿಗಳು ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಿವಕುಮಾರ ಮ್ಯಾಗಳಮನಿ ಹೇಳೀದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಪದಾಕಾರಿಗಳಾದ ಎಸ್.ನರಸಿಂಹಲು, ಡಿ.ಬಸವರಾಜ, ಸಾದೀಕ್ ಪಾಷಾ, ಲಕ್ಷ್ಮಣ ಮಂಡಲಗೇರಾ, ಹನುಮೇಶ ಅರೋಲಿ, ಜಲಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net