ಟೈಲರಿಂಗ್‌ಗಿದೆ ವಿಪುಲ ಅವಕಾಶ

Bel_Tailoring
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಹಳ್ಳಿಂಗೇರಿ ಸಮುದಾಯ ಭವನದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯೆ ಪವಿತ್ರ ಉದ್ಘಾಟಿಸಿದರು.

ಪಂಚಮಿ ಹಿತಾರ್ಯೂಧಾಮ ಆಸ್ಪತ್ರೆಯ ವೈದ್ಯಾಧಿಕಾರಿ ತಾರಾ ಮಾತನಾಡಿ, ಹೇಮಾವತಿ ವೀ.ಹೆಗ್ಗಡೆಯವರು ಎಲ್ಲ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೇರಣೆಯನ್ನು ನೀಡುವ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಅವಕಾಶಗಳನ್ನು ನೀಡುತ್ತಿದ್ದು ಅದಕ್ಕೆ ಪೂರಕವಾಗಿ ನಮ್ಮ ಊರಿನ ಮಹಿಳೆಯರಿಗೆ ಉಚಿತ ತರಬೇತಿ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಟೈಲರಿಂಗ್‌ಗೆ ಸಾಕಷ್ಟು ಅವಕಾಶ ಇದೆ ಎಂದು ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಸುರೇಂದ್ರ ಮಾತನಾಡಿ, ಟೈಲರಿಂಗ್ ಉದ್ಯಮಕ್ಕೆ ಬಹಳಷ್ಟು ಅವಕಾಶಗಳಿವೆ. ನಮ್ಮ ಸಿರಿ ಸಂಸ್ಥೆಯಲ್ಲಿಯೂ ಉದ್ಯೋಗಾವಕಾಶಗಳಿದ್ದು, ಎಲ್ಲರೂ ತರಬೇತಿಗೆ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಸ್ವಉದ್ಯೋಗ ಮಾಡುವಂತೆ ತಿಳಿಸಿದರು.

ತರಬೇತಿ ಶಿಕ್ಷಕರಾದ ಸುಶೀಲ ತರಬೇತಿ ಬರುವಾಗ ತರಬೇಕಾದ ಪರಿಕರಗಳು ಮತ್ತು ಸಮಯದ ಬಗ್ಗೆ ತಿಳಿಸಿದರು. ವಲಯ ಮೇಲ್ವಿಚಾರಕಿ ಭಾಗೀರಥಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾವಸಂತ್ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಕುಸುಮಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ರೋಹಿಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net