ಬಂಗಾರಪೇಟೆಯಲ್ಲಿ ಭಾರಿ ಸದ್ದು!

Published on

ಬಂಗಾರಪೇಟೆ : ದೇಶದಲ್ಲಿ ಪ್ರಸ್ತುತ ಆಪರೇಷನ್​ ಸಿಂಧೂರ, ಮಾಕ್​ಡ್ರಿಲ್​ ಇತ್ಯಾದಿ ಯುದ್ಧದ ಕಾಮೋರ್ಡ ಕವಿದಿರುವ ಮಧ್ಯೆ ಪಟ್ಟಣದಲ್ಲಿ ಕೇಳಿಬಂದ ದೊಡ್ಡ ಸದ್ದು ಆತಂಕ ಸೃಷ್ಟಿಸಿದೆ.

ಗುರುವಾರ ಬೆಳಗ್ಗೆ 10.47ರ ಸುಮಾರಿಗೆ ಬಂಗಾರಪೇಟೆ ಪಟ್ಟಣದಾದ್ಯಂತ "ಢಂ' ಎಂದು ಜೋರಾದ ಶಬ್ದ ಇದ್ದಕ್ಕಿದ್ದಂತೆ ಕೇಳಿಬಂದಿದ್ದು ಜನ ಕ್ಷಣಕಾಲ ಭಯಭೀತರಾದರು.ಸುಮಾರು 20 ಕಿಮೀ ದೂರ ಈ ಸದ್ದು ಕೇಳಿಸಿದೆ. ಟ್ರಾನ್ಸ್​ ಫಾರ್ಮರ್​, ಗ್ಯಾಸ್​ ಸಿಲಿಂಡರ್​ ಅಥವಾ ಇನ್ನಾವುದೋ ಸ್ಪೋಟಿಸಿದಂತೆ ಶಬ್ದ ಕೇಳಿಬಂತು. ಆದರೆ ಯಾವುದೇ ಅವಡ ಸಂಭವಿಸದಿದ್ದರೂ ಶಬ್ದ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ತಿಳಿಯಲು ಜನತೆ ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದರೂ ರಹಸ್ಯ ಪತ್ತೆಯಾಗಲಿಲ್ಲ.

ಇತ್ತ ಬೆಸ್ಕಾಂನಲ್ಲಿ ಕೇಳಿದರೆ ಎಲ್ಲೂ ಟ್ರಾನ್ಸ್​ಫಾಮ್​ರ್ ಬ್ಲ್ಯಾಸ್ಟ್​ ಆಗಿಲ್ಲ ಎಂದಿದ್ದರೆ ಪೊಲೀಸ್​ ಇಲಾಖೆಯವರು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಬಹುಶಃ ಭೂಮಿಯ ಒಳಗಡೆ ಅಥವಾ ಆಕಾಶದಲ್ಲಿ ಸಂಭವಿಸಿರುವ ಸದ್ದು ಇದಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಬೆಳಗ್ಗೆ ದೊಡ್ಡ ಶಬ್ದ ಕೇಳಿ ಬಂದಿದ್ದರಿಂದ ಗಾಬರಿ ಉಂಟಾಯಿತು. ಇದು ಮೊದಲ ಬಾರಿಗೆ ಬಂಗಾರಪೇಟೆಯಲ್ಲಿ ಕೇಳಿ ಬಂದ ಭಾರಿ ಶಬ್ದವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಇರುವಾಗ ಕೇಳಿ ಬಂದ ಈ ಶಬ್ದ ಸಹಜವಾಗಿ ಆತಂಕ ಮೂಡಿಸಿದೆ. | ನಾಗರಾಜ್​ ತಿಮ್ಮಾಪುರ ಬಂಗಾರಪೇಟೆ ಆತಂಕ ಹುಟ್ಟಿಸಿದ ಶಬ್ದ ಕುರಿತು ತನಿಖೆ ಮಾಡಲಾಗುತ್ತಿದೆ. ಸದ್ದು ಕೇಳಿ ಬಂದಿರುವ ಬಗ್ಗೆ ಮಾಹಿತಿ ಇದೆ. ಆದರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೊತ್ತಿಲ್ಲದೆ ಮಾತನಾಡುವುದು ತಪ್ಪು. | ಶಾಂತರಾಜು ಪೊಲೀಸ್​ ವರಿಷ್ಠಾಧಿಕಾರಿ, ಕೆಜಿಎಫ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net