ಕಳಸ: ತೋಟದೂರು ಗ್ರಾಮ ಪಂಚಾಯಿತಿಯ ತನೂಡಿ ಗ್ರಾಮ, ಅಳುಗೋಡು, ಕಾಳಿಪಾಳು, ಬಿಳುಗೂರು ಗ್ರಾಮಕ್ಕೆ ಕಾಡಾನೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ..ಅಳುಗೋಡು ಗ್ರಾಮದ ವಾಸುದೇವ, ಎ.ಕೆ.ದೇವಪ್ಪ, ಎ.ಕೆ.ಪರಮೇಶ್ವರ್, ಕಾಳಿಪಾಳಿನ ಉಮೇಶ್ ಪೂಜಾರಿ ಅವರ ಜಮೀನಿಗೆ ನುಗ್ಗಿದ ಕಾಡಾನೆ ಅಡಕೆ, ಬಾಳೆ, ಕಾಫಿ ಗಿಡಗಳನ್ನು ನಾಶಪಡಿಸಿದೆ.