

ದೊಡ್ಡಬಳ್ಳಾಪುರ: ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದ ತಾಯಿ-&ಮಗು ಸಾರ್ವಜನಿಕ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯನ್ನು ಕೆಆರ್ಎಸ್ ಪಕ್ಷದಿಂದ ಸನ್ಮಾನಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ, ಯಾವುದೇ ಸಂಸ್ಥೆಯಾಗಲಿ ತಳಮಟ್ಟದಲ್ಲಿ ಕಾರ್ಮಿಕರು ಶ್ರಮ ವಹಿಸದೆಯಿದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ, ಕಾರ್ಮಿಕರ ಹಿತಾಸಕ್ತಿ ಕಾಯುವ ಹಾಗೂ ಅವರ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಶ್ರಮಿಕರ ಈ ದಿನವನ್ನು ಸಂಭ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸ್ವಚ್ಛತಾ ಸಿಬ್ಬಂದಿಗಳಿಗೆ ಶುಭವಾಗಲಿ ಎಂದರು.
ಪದಾಧಿಕಾರಿಗಳಾದ ಎಚ್.ಎನ್ ವೇಣು, ಅಲೀಂ, ಸಮೀರ್, ಸುಬ್ರಹ್ಮಣಿ, ಭಾಷಾ, ಲಲಿತಮ್ಮ, ಕುಮಾರ್, ಶಶಿ, ನಾರಾಯಣಸ್ವಾಮಿ, ರಮೇಶ್ ಇದ್ದರು.