

ಜಿ.ಕೆ.ಸುಗ್ಗರಾಜು ನೆಲಮಂಗಲ
ರಾಜ್ಯ ರಾಜಧಾನಿಯ ಹೆಬ್ಬಾಗಿಲಾಗಿರುವ ಜತೆಗೆ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನಗರದ ಸಾರ್ವಜನಿಕ ಆಸ್ಪತ್ರೆ ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿದೆ.
ಅತ್ಯಾಧುನಿಕ ಚಿಕಿತ್ಸಾ ಹಾಗೂ ಪರೀಾ ವಿಧಾನಗಳ ಸೌಕರ್ಯಗಳಿಲ್ಲದೆ ಮಧ್ಯಮ ಹಾಗೂ ಬಡ ವರ್ಗದ ಜನತೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ.
ತಾಲೂಕು ಕೇಂದ್ರವಾಗಿರುವ ನೆಲಮಂಗಲದಲ್ಲಿ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಿರುವೆ, ಬೆಂಗಳೂರು ನಗರಕ್ಕೆ ಕೆಲಸ ಕಾರ್ಯಗಳಿಗಾಗಿ ನಿತ್ಯ ಸಹಸ್ರಾರು ಜನ ಭೇಟಿ ನೀಡುತ್ತಾರೆ. ನಗರದಲ್ಲಿ ರಾಜ್ಯ, ರಾಷ್ಟಿ$ಯ ಹೆದ್ದಾರಿಗಳ ಜತೆಗೆ ಅಂತಾರಾಜ್ಯ ಹೆದ್ದಾರಿಗಳು ಹಾದುಹೋಗಿದ್ದು, ನಿತ್ಯ ಅಪಘಾತಗಳ ಸಂಖ್ಯೆಯೂ ಮಿತಿಮೀರಿದೆ. ಆದರೆ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾಟಕ ಇಲ್ಲ, ತ ವೈದ್ಯರು, ತಂತ್ರನರ ಜತೆಗೆ ಅತ್ಯಾಧುನಿಕ ಯಂತ್ರೋಪಕರಣಗಳ ಸೌಲಭ್ಯವಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.
ವೈದ್ಯರು, ಸಿಬ್ಬಂದಿ ನಿಯೋಜಿಸಿಲ್ಲ : ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸಿಷಿಯನ್, 4 ತುರ್ತು ಚಿಕಿತ್ಸಾ ವೈದ್ಯರು, ನೇತ್ರಾ ತರು ಸೇರಿ ಬಹುತೇಕ ವೈದ್ಯ, ಸಿಬ್ಬಂದಿ ಕೊರತೆ ಇದೆ. ಆದರೂ ಇದುವರೆಗೂ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆ ಮಾಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಫಲವಾಗಿದೆ. ಸುಮಾರು 32 ಡಿ ಗ್ರೂಪ್ ನೌಕರ ಪೈಕಿ 3 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವುದು ವಿಪರ್ಯಾಸ. ಪ್ರತಿದಿನ ಅಂದಾಜು 1 ಸಾವಿರಕ್ಕೂ ಹೊರರೋಗಿಗಳ ಭೇಟಿಗೆ ಅವಕಾಶವಿದ್ದು, 700ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ನಿತ್ಯ ಬೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಹೃದಯ, ಮೂಳೆ ಸಂಬಂಧಿ ಹಾಗೂ ಮಕ್ಕಳ ಚಿಕಿತ್ಸೆಗೆ ಸೇರಿದಂತೆ ತುರ್ತು ಚಿಕಿತ್ಸೆಗೆ ಹೆಚ್ಚು ಸಾರ್ವಜನಿಕ ಆಸ್ಪತ್ರೆ ಅವಲಂಬಿಸಿದ್ದು ಮಕ್ಕಳ ತರು, ತುರ್ತು ವೈದ್ಯರು ಸೇರಿ ಕೆಲ ಹಾಗೂ ಸಿಬ್ಬಂದಿಯ ಕೊರತೆ ಇದೆ.
ಖಾಸಗಿ ಲ್ಯಾಬ್ ಜತೆ ಒಳಒಪ್ಪಂದ : ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ತೀವ್ರ ನಿಗಾ ಟಕ ಇಲ್ಲ, ಸಿಟಿ ಸ್ಕಾ$್ಯನಿಂಗ್, ಎಂಆರ್ಐ ಸ್ಕ್ಯಾನಿಂಗ್ ವ್ಯವಸ್ಥೆಯೂ ಇಲ್ಲ. ಗ್ರಾಮೀಣ ಭಾಗದ ರೈತರು ಸಾವಿರಾರು ರೂ ಹಣ ಖರ್ಚು ಮಾಡಿಕೊಂಡು ಖಾಸಗಿ ಆಸ್ಪತ್ರೆಗಳ ಲ್ಯಾಬ್ಗಳ ಹೋಗಿ ದುಪ್ಪಟ್ಟು ಹಣ ತೆರಬೇಕಾಗಿದೆ. ಇನ್ನೊಂದೆಡೆ ಕೆಲ ಖಾಸಗಿ ಲ್ಯಾಬ್ಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡಜನರಿಗೆ ಪರೀೆಗಳ ನೆಪವೊಡ್ಡಿ ಖಾಸಗಿ ಪ್ರಯೋಗಾಲಗಳಿಗೆ ಕಳುಹಿಸಿ ಕಮಿಷನ್ ಪಡೆಯುತ್ತಿದ್ದಾರೆಂಬ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ.
ಅಮಾಯಕರ ಪ್ರಾಣಕ್ಕೆ ಸಂಚಕಾರ : ನಿತ್ಯ ಒಂದಲ್ಲ ಒಂದು ಹೆದ್ದಾರಿಯಲ್ಲಿ ಅಪಘಾತ ಸಂಭವಿಸುತ್ತಿದ್ದು, ಅದೆಷ್ಟೋ ಜನರು ಸ್ಥಳದಲ್ಲೇ ಕೊನೆಯುಸಿರೆಳೆದು ಶವಾಗಾರ ಸೇರಿದರೆ, ತೀವ್ರವಾಗಿ ಗಾಯಗೊಂಡ ಹಲವರು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ದೊಡ್ಡ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದ ಉದಾಹರಣೆಗಳು ಬಹಳಷ್ಟಿವೆ. ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯಯಳ್ಳ ಸುಸಜ್ಜಿತ ಕಟ್ಟವೇನೋ ಇದೆ. ಆದರೆ ಅಗತ್ಯ ಸೌಕರ್ಯಗಳು, ವೈದ್ಯರಿಲ್ಲ. ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಹಾಗೂ ಒಳರೋಗಿಗಳ ವಿಭಾಗ, ಐಸಿಯು, ಜನರಲ್ ವಾರ್ಡ್ ಸೇರಿ ಪ್ರತ್ಯೇಕ ಶಸ್ತ್ರಚಿಕಿತ್ಸಾ ವಿಭಾಗ, ಹೆರಿಗೆ ಹಾಗೂ ಬಾಣಂತಿಯರ ವಾರ್ಡ್ಗಳಿದ್ದು, ಸ್ವಚ್ಛತೆ ಇಲ್ಲ. ಆದರೆ ಇತ್ತೀಚೆಗೆ ಖಾಸಗಿ ಕಂಪನಿಯೊಂದು ಸಿಎಸ್ಆರ್ ಅನುದಾನದಲ್ಲಿ ಆಸ್ಪತ್ರೆಯನ್ನು ನವೀಕರಣಗೊಳಿಸಿದ್ದು, ರೋಗಿಗಳಿಗೆ ಸಲ್ಪ ಪ್ರಮಾಣದಲ್ಲಿ ಅನುಕೂಲವಾಗಿದೆ.
ಕುಡಿಯುವ ನೀರಿನ ಸಮಸ್ಯೆ : ಕಳೆದ ನಾಲ್ಕೈದು ವರ್ಷದ ಹಿಂದೆ ಖಾಸಗಿ ಬ್ಯಾಂಕಿನಿಂದ ನೀಡಿದ್ದ ಶುದ್ಧ ಕುಡಿಯುವ ನೀರಿನ ಟಕ ಸರಿಯಾದ ರೀತಿ ನಿರ್ವಹಣೆ ಆಗಿಲ್ಲ. ರೋಗಿಗಳು ಹಣ ಕೊಟ್ಟು ನೀರು ಖರೀದಿ ಮಾಡುವ ಪರಿಸ್ಥಿತಿ ಇದೆ. ಜತೆಗೆ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ಆವರಣ ಸೇರಿ ಶೌಚಗೃಹ ಗಬ್ಬೆದ್ದು ನಾರುತ್ತಿದೆ.
ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಕೆಲ ಸಮಸ್ಯೆಗಳು ಎದುರಾಗುತ್ತಿದೆ. ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದು, ನಿಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಡಯಾಲಿಸೀಸ್ ಯಂತ್ರವಿದ್ದು, ನಿತ್ಯ 10ಮಂದಿ ಡಯಾಲಿಸಿಸ್ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಟಿ ಸ್ಕಾ$್ಯನಿಂಗ್, ಎಂಆರ್ಐ ಸ್ಕಾ$್ಯನಿಂಗ್ ವ್ಯವಸ್ಥೆ ಮಾಡಿದಲ್ಲಿ ಬಡಜನರಿಗೆ ಸಹಕಾರಿಯಾಗಲಿದೆ. | ಡಾ.ಸೋನಿಯಾ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ತ ವೈದ್ಯರಿದ್ದು ಉತ್ತಮ ರೀತಿಯ ಸೇವೆ ನೀಡುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಸಮಸ್ಯೆಗಳಿದ್ದು, ಆಸ್ಪತ್ರೆ ನವೀಕರಣ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಮಾಡಬೇಕು. | ಜಗದೀಶ್ ಸ್ಥಳಿಯ ನಿವಾಸಿ