

ಶಿವಮೊಗ್ಗ: ಸರ್ಕಾರವೇ ರೂಪಿಸಿರುವ ಯುವನಿಧಿ ಯೋಜನೆ ನಿಯಮದಂತೆ ಶಿವಮೊಗ್ಗದಲ್ಲಿ ಯಾವೊಬ್ಬ ಫಲಾನುಭವಿಗಳೂ ಇಲ್ಲ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ ಆರೋಪಿಸಿದರು.
ಯುವನಿಧಿ ಯೋಜನೆ ಅರ್ಜಿಯ ಕೊನೆಯಲ್ಲಿ ಫಲಾನುಭವಿ ಉತ್ತೀರ್ಣರಾಗಿ 6 ತಿಂಗಳು ಆಗಿರಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾಗಿದೆ. ಹಾಗಾಗಿ ಇಲ್ಲಿ ಯಾವೊಬ್ಬ ಫಲಾನುಭವಿ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಾವಣಗೆರೆ ವಿವಿಯಲ್ಲೂ ಬಹುತೇಕ ಅದೇ ಸಮಯಕ್ಕೆ ಲಿತಾಂಶ ಪ್ರಕಟವಾಗಿದೆ. ಆ ವಿದ್ಯಾರ್ಥಿಗಳೂ ಯೋಜನೆಯ ಲಾನುಭವಿ ಆಗಲ್ಲ. ಅರ್ಜಿ ಸಲ್ಲಿಸಬಹುದು ಅಷ್ಟೇ. ಆದರೆ ಹಣ ಪಡೆಯಲು ಏಪ್ರಿಲ್‌ವರೆಗೆ ಕಾಯಬೇಕಾಗುತ್ತದೆ. ಲಾನುಭವಿಗಳೇ ಇಲ್ಲದೇ ಕಾರ್ಯಕ್ರಮ ಮಾಡಿ ಯಾರಿಗೆ ಹಣ ಹಾಕುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣಾ ಪೂರ್ವದಲ್ಲಿ ಎಲ್ಲ ನಿರುದ್ಯೋಗಿ ಲಾನುಭವಿಗಳಿಗೆ ಯುವನಿಧಿ ನೀಡಲಾಗುವುದು ಎಂದಿದ್ದರು. ಈಗ 2023ರಲ್ಲಿ ಉತ್ತೀರ್ಣವಾಗಿ 6 ತಿಂಗಳು ಆಗಿರಬೇಕೆಂಬ ಮಾನದಂಡ ರೂಪಿಸಿದ್ದಾರೆ. ಹಾಗಿದ್ದರೆ ಇನ್ನುಳಿದ ನಿರುದ್ಯೋಗಿಗಳು ಏನು ಮಾಡಬೇಕು? ಇವರ ಬದಲಾದ ನಿಲುವಿನಿಂದ ಅನೇಕರು ಭ್ರಮನಿರಸನಗೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಯುವಮೋರ್ಚಾ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಸುಹಾಸ್ ಶಾಸಿ, ಗಣೇಶ್, ಸಂಗಯ್ಯ, ರಾಹುಲ್ ಬಿದರೆ ಸುದ್ದಿಗೋಷ್ಠಿಯಲ್ಲಿದ್ದರು.