

ಶೃಂಗೇರಿ: ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹಗರಣಗಳೇ ತುಂಬಿಕೊಂಡಿದ್ದವು. ಗರೀಬಿ ಹಟಾವೋ ಘೋಷಣೆ ಆಗಿತ್ತೇ ಹೊರತು ಬಡವರು ಶ್ರೀಮಂತರಾಗಲಿಲ್ಲ ಎಂದು ವಕೀಲ ಜಿ.ಎಂ.ಸತೀಶ್ ಹೇಳಿದರು.
ಕೂತಗೋಡು ಗ್ರಾಪಂ ವೈಕುಂಠಪುರದಲ್ಲಿ ಗುರುವಾರ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದ್ದು, ಬೆರಳ ತುದಿಯಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗುತ್ತಿದೆ. ಸಾಮಾನ್ಯ ಜನರೂ ಬ್ಯಾಂಕ್ ವ್ಯವಹಾರ ಮಾಡುತ್ತಿದ್ದಾರೆ. ಕೈಗಾರಿಕೆಗಳು ಲಾಭದ ಹಾದಿಯಲ್ಲಿ ಮುನ್ನಡೆದು ಭಾರತದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಭರತ್ ಮಾತನಾಡಿ, ಸುಭದ್ರ ಸರ್ಕಾರಕ್ಕಾಗಿ ಎಚ್.ಡಿ.ದೇವೇಗೌಡರ ಆಶಯದಂತೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಸರಳ, ಸಜ್ಜನ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ವೆಂಕಪ್ಪಾಚಾರ್ಯ, ಸೂರ್ಡಿ ಚಂದ್ರಶೇಖರ್, ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್, ಎಚ್.ಎಸ್.ಸುಬ್ರಹ್ಮಣ್ಯ ಇದ್ದರು.