ಮಕ್ಕಳು ಏಕಾಗ್ರತೆ ಸಾಧನೆಗಿವೆ ಯೋಗಾದಲ್ಲಿ ಹಲವು ತಂತ್ರಗಳು

8
Published on

ಮೈಸೂರು: ಎಲ್ಲ ರೋಗಗಳಿಗೆ ಯೋಗ, ವ್ಯಾಯಾಮ ಮತ್ತು ಮನಸ್ಸಿನ ಆರೋಗ್ಯಕ್ಕೆ ಧ್ಯಾನ ಸಹಕಾರಿ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೆಎಂಪಿಕೆ ಟ್ರಸ್ಟ್‌ನಿಂದ ಕುಕ್ಕರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಮ್ಯಾಟ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಯೋಗ, ವ್ಯಾಯಾಮದ ಮೂಲಕ ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಬಹುದು. ಇದು ದೇಹ ಹಾಗೂ ಮನಸ್ಸಿನ ಆರೋಗ್ಯ ಕಾಪಾಡಲು ಸಹಕಾರಿ ಎಂದರು.
ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಅತ್ಯವಶ್ಯ. ಅದಕ್ಕಾಗಿ ನಿತ್ಯವೂ ದೇಹ ದಂಡನೆ ಮಾಡಬೇಕು. ಮಕ್ಕಳು ಏಕಾಗ್ರತೆ ಸಾಧಿಸಲು ಹಲವು ತಂತ್ರಗಳಿವೆ. ಅವುಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಟರಾಜ್ ಜೋಯಿಸ್ ಮಾತನಾಡಿ, ಓದಿನಲ್ಲಿ ಸಾಧನೆ ಮಾಡಬೇಕಾದರೆ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಆಧುನಿಕ ಜೀವನಶೈಲಿಯಿಂದ ರೋಗಗಳು ಬರುತ್ತಿದ್ದು, ಜೀವನಶೈಲಿ ಬದಲಾವಣೆ ಮಾಡಿಕೊಂಡು ಯೋಗವನ್ನು ಸೀಮಿತಗೊಳಿಸದೆ ನಿತ್ಯ ಊಟ, ನಿದ್ರೆಯಂತೆ ಯೋಗವನ್ನೂ ದಿನಚರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹಿರಿಯ ಯೋಗ ಸಾಧಕರಾದ ರಾಘವೇಂದ್ರ ಪೈ ಅವರು ಮಕ್ಕಳಿಗೆ ಯೋಗದ ಮಹತ್ವ ಹಾಗೂ ಕೆಲವು ಯೋಗದ ಆಸನಗಳನ್ನು ತಿಳಿಸಿಕೊಟ್ಟರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೈ ಭೀಮ್ ಜನಸ್ಪಂದನಾ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ಮುಖಂಡರಾದ ಅಜಯ್ ಶಾಸ್ತ್ರಿ, ನವೀನ್, ರವಿಚಂದ್ರ, ಬೈರತಿ ಲಿಂಗರಾಜು, ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರು, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಿಕ್ಟೋರಿಯಾ, ಶಾಲೆಯ ಶಿಕ್ಷಕರಾದ ಪಾರ್ವತಿ ದಿವ್ಯಾ, ಪ್ರಿಯದರ್ಶಿನಿ, ರಾಕೇಶ್, ಸದಾಶಿವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net