ಯುಸಿಸಿ ಕಾಯ್ದೆ ಜಾರಿಗಿದೆ ಅನೇಕ ಸವಾಲುಗಳು

26KAGWAD2.jpeg
Published on

ಕಾಗವಾಡ: ಭಾರತದಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೆವಿಧ್ಯತೆ ಕಾರಣದಿಂದಾಗಿ ಯುಸಿಸಿ ಕಾರ್ಯಗತಗೊಳಿಸಲು ಅನೇಕ ಸವಾಲುಗಳಿವೆ ಎಂದು ಶಿವಾನಂದ ಮಹಾವಿದ್ಯಾಲಯದ ನಿವತ್ತ ಪ್ರಾಚಾರ್ಯ ಪ್ರೊ. ಬಿ.ಎ.ಪಾಟೀಲ ಹೇಳಿದರು.

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ಬಿ.ಎ.ಪಾಟೀಲ, ಪ್ರೊ. ಎಸ್.ಎಸ್.ಬಾಗನೆ, ಡಾ.ಎಸ್.ಪಿ.ತಳವಾರ, ಡಾ.ಎ.ಎಂ.ಜಕ್ಕಣ್ಣವರ ಇತರರು ಇದ್ದರು.
ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ಬಿ.ಎ.ಪಾಟೀಲ, ಪ್ರೊ. ಎಸ್.ಎಸ್.ಬಾಗನೆ, ಡಾ.ಎಸ್.ಪಿ.ತಳವಾರ, ಡಾ.ಎ.ಎಂ.ಜಕ್ಕಣ್ಣವರ ಇತರರು ಇದ್ದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಸಮಾಜ ವಿಜ್ಞಾನಗಳ ಸಂಘದ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ  ಅವರು  ಮಾತನಾಡಿದರು.
ನಿವತ್ತ ಉಪ ಪ್ರಾಚಾರ್ಯ ಪ್ರೊ. ಎಸ್.ಎಸ್.ಬಾಗನೆ ಮಾತನಾಡಿ, ಯುವಕರಲ್ಲಿ ಸಾಕಷ್ಟು ರೀತಿಯ ಆಲೋಚನೆಗಳನ್ನು ಈ ಚರ್ಚಾ ಸ್ಪರ್ಧೆ ಹುಟ್ಟು ಹಾಕಿದೆ. ಪರ ಹಾಗೂ ವಿರೋಧವಾಗಿ ಅವರು ಮಂಡಿಸಿದ ವಿಚಾರಗಳು ಪ್ರಬುದ್ಧತೆಯಿಂದ ಕೂಡಿವೆ ಎಂದರು.

ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ದೇಶವನ್ನು  ತಲ್ಲಣಗೊಳಿಸಿದೆ. ಇದರ ಆಳ ಅಗಲದ ಕುರಿತು ವಿವಿಧ ವಿದ್ಯಾರ್ಥಿಗಳ ಅಭಿಪ್ರಾಯ ತಿಳಿದುಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯದ ಬೇರೆ ಬೇರೆ ಮಹಾವಿದ್ಯಾಲಯಗಳಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದರು.

ಡಾ.ಎಸ್.ಪಿ.ತಳವಾರ,  ಸ್ಪರ್ಧೆಯ ಸಂಯೋಜಕ ಡಾ.ಎ.ಎಂ.ಜಕ್ಕಣ್ಣವರ, ಸಮಾಜ ವಿಜ್ಞಾನಗಳ ಸಂಘದ ಚೇರ್ಮನ್ ಡಾ.ಆರ್.ಎಸ್.ಕಲ್ಲೋಳಿಕರ, ಪದ್ಮಾವತಿ ನರೋಟಿ,  ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ, ಆಡಳಿತ ಅಕಾರಿ ಪ್ರೊ. ವಿ.ಎಸ್.ತುಗಶೆಟ್ಟಿ, ಪ್ರೊ. ಜೆ.ಕೆ.ಪಾಟೀಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net