ಕನ್ನಡ ಭಾಷೆಗೆ ಹಲವಾರು ಸವಾಲು

52
Published on


ಮೈಸೂರು: ನಮ್ಮ ಭಾಷೆಗೆ ಹಲವಾರು ಸವಾಲುಗಳಿದ್ದು, ಆ ಸವಾಲುಗಳನ್ನು ಎದುರಿಸಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಹೆಚ್ಚುವರಿ ಆರಕ್ಷಕ ಅಧೀಕ್ಷಕಿ ಡಾ.ಬಿ.ಎನ್. ನಂದಿನಿ ತಿಳಿಸಿದರು.


ಸಿದ್ಧಾರ್ಥನಗರದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಚನ ಸಾಹಿತ್ಯ ಜನಸಾಮಾನ್ಯರ ದನಿಯಾಗಿ ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯವನ್ನು ಜನಮಾನಸದಲ್ಲಿ ಪಸರಿಸಿತು ಎಂಬ ವಿಚಾರಗಳನ್ನು ಹಲವಾರು ನಿದರ್ಶನಗಳ ಮೂಲಕ ವಿವರಿಸಿದರು.


ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಾತನಾಡಿ, ಪರಭಾಷಾ ವ್ಯಾಮೋಹಕ್ಕೆ ತುತ್ತಾಗದೆ ಕನ್ನಡ ಭಾಷೆಯ ಮಹತ್ವವನ್ನು ಅರಿಯಬೇಕು. ಕನ್ನಡ ಉಳಿವಿಗಾಗಿ ನಡೆದ ಕನ್ನಡಪರ ಚಳವಳಿಗಳ ನಿದರ್ಶನಗಳನ್ನು ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಹೇಳಿದರು. ಶಾಲೆಯ ಪ್ರಾಂಶುಪಾಲೆ ಲತಾ, ಉಪ ಪ್ರಾಂಶುಪಾಲ ಎಸ್.ಎಲ್. ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net