

ಕೂಡ್ಲಿಗಿ: ಶ್ರೀಕೃಷ್ಣ ಪರಮಾತ್ಮ ಜಗದೊಡೆಯನಾಗಿದ್ದು ಯಾವುದೇ ಧರ್ಮಕ್ಕೆ ಸೀಮಿತವಾಗದೆ ಸರ್ವ ಜನಾಂಗದವರು ಆರಾಧಿಸುವ ದೈವವಾಗಿದ್ದಾನೆ ಎಂದು ಕಾಡುಗೊಲ್ಲ ಸಮಾಜದ ಜಿಲ್ಲಾಧ್ಯಕ್ಷ ಸಣ್ಣ ಬಾಲಪ್ಪ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.ಶ್ರೀ ಕೃಷ್ಣ ಅನೇಕ ಲೀಲೆಗಳ ಮೂಲಕ ಜಗತ್ತಿಗೆ ಸತ್ಯ ಸಂದೇಶವನ್ನು ಸಾರಿದ್ದಾನೆ. ಅಧರ್ಮ ತಲೆ ಎತ್ತಿದಲ್ಲಿ ಧರ್ಮ ಸಂಸ್ಥಾಪನೆಗಾಗಿ ಕೃಷ್ಣನಾಗಿ, ವಿಷ್ಣುವಾಗಿ, ರಾಮಚಂದ್ರನಾಗಿ ಅವತರಿದ ಎಂದರು.
ಮಹಾಭಾರತ ಯುದ್ಧದಲ್ಲಿ ಅಧರ್ಮವನ್ನು ಅನುಸರಿಸಿದ ಕೌರವ ಪಡೆಯನ್ನು ನಿರ್ನಾಮ ಮಾಡುವ ಮೂಲಕ ಸತ್ಯಮೇವ ಜಯತೇ ಎಂದು ಜಗತ್ತಿಗೆ ಸಾರಿದರು. ಹಿಂದುಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಶ್ರೀಕೃಷ್ಣ ಪರಮಾತ್ಮನ ಧರ್ಮದ ಪ್ರತೀಕವಾದ ಸಂದೇಶಗಳ ಹೊತ್ತಿಗೆಯಾಗಿದ್ದು, ಆ ಪುಸ್ತಕದ ಸಾರವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಸತ್ಯ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು ಎಂದರು.
ತಹಸೀಲ್ದಾರ್ ಟಿ.ಜಗದೀಶ್, ಕಾಡುಗೊಲ್ಲ ಸಮಾಜದ ತಾಲೂಕು ಅಧ್ಯಕ್ಷ ಜಿ.ಎಸ್.ದೊಡ್ಡಪ್ಪ, ಪಪಂ ಮಾಜಿ ಸದಸ್ಯ ಸಣ್ಣಯ್ಯ, ಪ್ರಮುಖರಾದ ಕೆ.ಬಸವರಾಜ, ಮಹಾಲಿಂಗಪ್ಪ, ತಿಮ್ಮಪ್ಪ, ದೊಡ್ಡಪ್ಪ, ಜಿ.ವೀರೇಶ, ಸಿರಿಯಪ್ಪ, ಸಿದ್ದೇಶ, ಬುಗುಡಿ ಬಾಲಪ್ಪ ಇತರರಿದ್ದರು.