ಸಂಗಮನಾಥನ ಸನ್ನಿಧಿಗೆ 8 ಮೆಟ್ಟಿಲು ಬಾಕಿ

Narayanapur Dam
ಬಸವಣ್ಣನ ಐಕ್ಯ ಮಂಟಪ ಬಳಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ.
Published on

ಕೂಡಲಸಂಗಮ : ಆಲಮಟ್ಟಿ ಜಲಾಶಯದಿಂದ ಸೋಮವಾರ ಸಂಜೆ 1 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಿದ್ದರಿಂದ ನಾರಾಯಣಪುರ ಜಲಾಶಯದ ಹಿನ್ನೀರು ಅಧಿಕಗೊಂಡು ಸಂಗಮೇಶ್ವರ ದೇವಾಲಯಕ್ಕೆ ಗಂಗೆ ತಲುಪಲು 8 ಮೆಟ್ಟಿಲು ಬಾಕಿ ಇವೆ.

ನದಿಯಲ್ಲಿ ಅಧಿಕ ನೀರು ಹರಿಯುತ್ತಿರುವುದರಿಂದ ಮಂಗಳವಾರ ಬೆಳಗ್ಗೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ತಂಡೋಪ ತಂಡವಾಗಿ ಸುಕ್ಷೇತ್ರಕ್ಕೆ ಆಗಮಿಸಿ ಕೃಷ್ಣಾ- ಮಲಪ್ರಭಾ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮನಾಥ, ಬಸವಣ್ಣ ಐಕ್ಯ ಸ್ಥಳದ ದರ್ಶನ ಪಡೆದರು. ಬಸವಣ್ಣನ ಐಕ್ಯ ಮಂಟಪ ಹಾಗೂ ತಂಗಡಗಿಯ ನೀಲಾಂಬಿಕೆಯ ಐಕ್ಯ ಮಂಟಪ, ಅಡವಿಹಾಳ-ಕೂಡಲಸಂಗಮ ಸೇತುವೆ ಮೇಲಿಂದ ಕೃಷ್ಣಾ, ಮಲಪ್ರಭಾ ನದಿಯ ವಿಹಂಗಮ ನೋಟ ನೋಡಿ ಜನರು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net