ತೇರದಾಳ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

Theradala Municipality under Congress
ತೇರದಾಳದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಕಾಂಗ್ರೆಸ್ ಪರ ಸದಸ್ಯರು. ಅಧ್ಯಕ್ಷ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷ ನಸರೀನ್‌ಬಾನು ನಗಾರ್ಜಿ ಇದ್ದರು.
Published on

ತೇರದಾಳ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷರಾಗಿ ನಸರೀನ್‌ಬಾನು ರಾಜೇಸಾಬ ನಗಾರ್ಜಿ ಆಯ್ಕೆಯಾಗಿದ್ದಾರೆ.

ಸ್ಥಳೀಯ ಪುರಸಭೆ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ 10 ಸದಸ್ಯರು, ಕಾಂಗ್ರೆಸ್ ಪರ 10 ಸದಸ್ಯರು ಪಕ್ಷೇತರ ಮೂವರು, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ ಸೇರಿ 25 ಮತಗಳು ಚಲಾವಣೆಗೊಂಡವು.

ಬಿಜೆಪಿ ಪರ ಸದಸ್ಯರಾದ ಲಕ್ಷ್ಮಣ ನಾಯಕ, ಕುಮಾರ ಸರಿಕರ ಹಾಗೂ ಪಕ್ಷೇತರ ಅಭ್ಯರ್ಥಿ ಮೌಲಾಅಲಿ ಹಾಫೀಜ್ ಚಿತ್ರಭಾನುಕೋಟಿ ಅವರು ಕಾಂಗ್ರೆಸ್ ಪರ ಮತಚಲಾಯಿಸಿದರು. ಹಾಗಾಗಿ ಪುರಸಭೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಸೇರಿತು.

ಬಾರಿ ಬಿಗಿ ಬಂಧೋಬಸ್ತ್

ಪುರಸಭೆ ಅಧಿಕಾರಕ್ಕೆ ಕಳೆದ ವಾರದಿಂದ ಸದಸ್ಯರ ಪಕ್ಷಾಂತರ ಚಟುವಟಿಕೆಯಿಂದಾಗಿ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಹಾಗಾಗಿ ಪೊಲೀಸ್ ಇಲಾಖೆ ಕೆಲ ದಿನಗಳಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಪುರಸಭೆ ಸುತ್ತಲೂ ಬ್ಯಾರಿಕೇಡ್ ಅಳವಡಿಕೆ, ಅಂತರದ ಜಾಗಗಳಲ್ಲಿ ಗನ್‌ಮ್ಯಾನ್ ನೇಮಕ ಸೇರಿ 100ಕ್ಕೂ ಅಧಿಕ ಸಿಬ್ಬಂದಿ ನಿಯೋಜಿಸಲಾಗಿತ್ತು. ಬಾಗಲಕೋಟೆ ಜಿಲ್ಲಾ ಹೆಚ್ಚುವರಿ ಎಸ್.ಪಿ. ಜಿದ್ದಿ, ರಬಕವಿ-ಬನಹಟ್ಟಿ ಸಿಪಿಐ ಸಂಜೀವ ಬಳಗಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಾಂತಿಯುತವಾಗಿ ಮತದಾನ ನಡೆಯಿತು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ್ ಸ್ವಾದಿ, ಚುನಾವಣಾಧಿಕಾರಿ ವಿಜಯಕುಮಾರ ಕಡಕೋಳ, ಮತ್ತಿತರರ ಅಧಿಕಾರಿಗಳು ಕಾರ್ಯನಿರ್ವಹಿಸಿದರು.

ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಸೇರಿ ಗುಲಾಲ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net