ಕುಡಿದ ಅಮಲಿನಲ್ಲಿ ಪತ್ನಿ ಕೊಲೆ ಮಾಡಿ ಪತಿ

murder
Published on

ತೇರದಾಳ: ಸಮೀಪದ ಹನಗಂಡಿ ಗ್ರಾಮದಲ್ಲಿ ಪತಿ ಮಹಾಶಯನೊಬ್ಬ ಕಲ್ಲಿನಿಂದ ಜಜ್ಜಿ ಪತ್ನಿಯನ್ನು ಭಾನುವಾರ ಕೊಲೆ ಮಾಡಿದ್ದಾನೆ.

ಉಮಾಶ್ರೀ ಗಣಪತಿ ಕುಂಚನೂರ (30) ಕೊಲೆಗೀಡಾದ ಮಹಿಳೆ. ಗ್ರಾಮದ ನಿವಾಸಿ ಗಣಪತಿ ಕುಂಚನೂರ ಕೂಲಿ ಕೆಲಸ ಮಾಡಿಕೊಂಡು ಮೂವರು ಗಂಡು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದನು. ಆದರೆ, ಕುಡಿತದ ಚಟದಿಂದಾಗಿ ನಿತ್ಯ ಪತ್ನಿ ಉಮಾಶ್ರೀಯೊಂದಿಗೆ ಜಗಳವಾಡುತ್ತಿದ್ದ. ಭಾನುವಾರ ರಾತ್ರಿಯೂ ಕುಡಿದು ಬಂದು ಜಗಳವಾಡಿ ಕಲ್ಲಿನಿಂದ ಜಜ್ಜಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣೆ ಕರ್ತವ್ಯದ ಮೇಲೆ ಬಂದಂಥ ಸಿಪಿಐ ಮಲ್ಲಯ್ಯ ಹಿರೇಮಠ ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net