ಕರೊನಾ ವಾರಿಯರ್ಸ್‌ಗೆ ಸ್ವಾಗತ

TDL NEWS 18-1
Published on

ತೇರದಾಳ: ಕೋವಿಡ್-19 ತಡೆಯಲು ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್‌ಗಳಾದ ಸೈನಿಕರು, ಪೊಲೀಸ್, ಅಧಿಕಾರಿಗಳಿಗೆ ತೇರದಾಳ ಪಟ್ಟಣದಲ್ಲಿ ಹೂವಿನ ಮಳೆಗರೆದು ಆರತಿ ಬೆಳಗಲಾಯಿತು.

ಪಟ್ಟಣದ ಮಾರುಕಟ್ಟೆ ಭಾಗದಿಂದ ಸಿದ್ಧೇಶ್ವರ ಗಲ್ಲಿಯವರೆಗೆ ರಂಗೋಲಿ ಹಾಕಿ ಸಾಮಾಜಿಕ ಅಂತರದ ವೃತ್ತಗಳನ್ನು ನಿರ್ಮಿಸಲಾಗಿತ್ತು.
ಜನತೆ ತಮ್ಮ ತಮ್ಮ ಮನೆಗಳ ಮುಂದೆ, ಮಹಡಿ ಮೇಲೆ ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಂತರ ಸಿದ್ಧೇಶ್ವರ ಗಲ್ಲಿಯಲ್ಲಿರುವ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಜಯ ಕಾಂಬಳೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರೊನಾ ರೋಗ ಜಗತ್ತಿನಲ್ಲೆಡೆ ಹಬ್ಬುತ್ತಿದ್ದು ನಾವು ಡೇಂಜರ್ ರೆನ್‌ನಲ್ಲಿ ಇದ್ದೇವೆ. ಎಲ್ಲರೂ ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ನಾವು ಕೈಗೊಂಡ ಕಠಿಣ ಕ್ರಮಗಳೆಲ್ಲವೂ ನಿಮ್ಮೆಲ್ಲರ ಜೀವ ರಕ್ಷಣೆಗಾಗಿಯೇ ಎಂದು ಹೇಳಿದರು.

ಬ್ಯಾಂಕ್ ಸಿಬ್ಬಂದಿ ಶ್ರೀನಾಥ ಸೊಟ್ಟಿ ಮಾತನಾಡಿದರು. ಮಾಜಿ ಸೈನಿಕ ಸುರೇಂದ್ರ ತಳವಾರ, ಪುರಸಭೆ ಅಧಿಕಾರಿ ಕೀರಪ್ಪ ಗಿಡ್ಡಿನ ಇದ್ದರು. ಶಿಕ್ಷಕ ಬಿ.ಟಿ. ಪತ್ತಾರ ನಿರೂಪಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net