

ತೇರದಾಳ: ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಬೇರೆ ಬೇರೆ ಭಾಗಗಳಲ್ಲಿ ವಲಸೆ ಹೋಗಿರುವ ತೇರದಾಳ ಸೇರಿ ಈ ಭಾಗದ ನೂರಾರು ಜನರು, ಸದ್ದಿಲ್ಲದೆ ವಾಪಸ್ ಬರುತ್ತಿದ್ದಾರೆ. ಅಂತಹವರನ್ನು ಹುಡುಕಿ ಆರೋಗ್ಯ ತಪಾಸಣೆ ನಡೆಸುವಲ್ಲಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತೀವ್ರ ಹೈರಾಣಾಗಿದ್ದಾರೆ.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ತೇರದಾಳ, ಸಸಾಲಟ್ಟಿ, ಕಾಲತಿಪ್ಪಿ, ಗೋಲಭಾವಿ, ಹಳಿಂಗಳಿ, ತಮದಡ್ಡಿ, ಹನಗಂಡಿ, ಯರಗಟ್ಟಿ ಗ್ರಾಮಗಳಿಗೆ ಬೆಂಗಳೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಮಹಾರಾಷ್ಟ್ರದ ಪುಣೆ, ಕೊಲ್ಲಾಪುರ, ಸಾಂಗ್ಲಿ ಭಾಗಗಳಿಂದ ಜನತೆ ಆಗಮಿಸುತ್ತಿದ್ದಾರೆ. ಅವರು ತಮ್ಮ ಮನೆಗಳಿಗೆ ಬರುತ್ತಿದ್ದಂತೆ ಅಕ್ಕಪಕ್ಕದ ಜನ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ತಾವು ಕೂಡ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರು ಹೊರಗಿನಿಂದ ಬಂದವರನ್ನು ವಿಚಾರಿಸಲು ಅವರವರ ಮನೆಗಳಿಗೆ ತೆರಳಿ ಮತ್ತೊಮ್ಮೆ ತಪಾಸಣೆ ಮಾಡಿಕೊಳ್ಳಲು ಸೂಚನೆ ನೀಡುತ್ತಿದ್ದಾರೆ.
ತಹಸೀಲ್ದಾರ್ ಸಿಟಿರೌಂಡ್
ಶನಿವಾರ ಬೆಳ್ಳಂಬೆಳಗ್ಗೆ ತಹಸೀಲ್ದಾರ್ ಪ್ರಶಾಂತ ಚನಗೊಂಡ ಪುರಸಭೆ, ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ನಗರದ ಸಸಾಲಟ್ಟಿ ರಸ್ತೆ, ಕಲ್ಲಟ್ಟಿ ಗಲ್ಲಿ, ಮಾರುಕಟ್ಟೆ, ಯಲ್ಲಮ್ಮನ ಗುಡಿ ರಸ್ತೆ, ತಮದಡ್ಡಿ ನಾಕಾ, ಅಂಬೇಡ್ಕರ್ ವೃತ್ತದವರೆಗೆ ರೌಂಡ್ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ ಇದ್ದರು.
EndFragment