ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ: ನೆಲಮಂಗಲದಿಂದ ತಪ್ಪಿಸಿಕೊಂಡ ಕಳ್ಳರು ವಿಜಯಪುರದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ!

Kalla
Published on

ವಿಜಯನಗರ: ಕಳ್ಳತನ ಆರೋಪಿಗಳನ್ನು ಬಂಧಿಸಲು ಪೊಲೀಸರು ಪಟ್ಟ ಪಾಡು ಅಷ್ಟಿಷ್ಟಲ್ಲ, ವಿಜಯಪುರದವರೆಗೂ ಬೆನ್ನಟ್ಟಿದ ನೆಲಮಂಗಲ ಪೊಲೀಸರು ಕೊನೆಗೂ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲದಿಂದ ಕಾರಿನಲ್ಲೇ ಹೊರಟಿದ್ದ ಕಳ್ಳರು ಕೊನೆಗೂ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸೆರೆಯಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಿನಿಂದ ಇಳಿದು ಹೊಲದಲ್ಲಿ ಓಡಿ ಹೋಗುತ್ತಿದ್ದ ಕಳ್ಳರನ್ನು ಹೆಡೆಮುರಿ ಕಟ್ಟಿ ಕಾರು ಸಮೇತ ಸೆರೆ ಹಿಡಿದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪೊಲೀಸರು ವಿಜಯಪುರಕ್ಕೆ ತೆರಳಿದ್ದರು. ಬಂಧಿತರು ಇತರೆ ಪ್ರಕರಣದಲ್ಲೂ ಭಾಗಿಯಾಗಿದ್ದರಿಂದ ಕಳ್ಳರನ್ನು ಬೆಂಬಿಡದೇ ಕೊನೆಗೂ ಬಂಧಿಸಿದ್ದಾರೆ.

ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು, ಕಾರಿನಲ್ಲಿ ಪರಾರಿಯಾಗಲು ಯತ್ನಿಸಿ, ವಿಜಯಪುರದವರೆಗೆ ಹೋಗಿದ್ದರು. ಕಾರಿನಲ್ಲಿ ಬಿಟ್ಟು ಹೊಲದಲ್ಲಿ ಓಡಿ ಹೋಗಲು ಯತ್ನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಳ್ಳರನ್ನು ಹಿಡಿದಿದ್ದಾರೆ.

ಸದ್ಯ ಇಟಗಿ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಬಳಿ ಚಿನ್ನದ ನಾಣ್ಯ ‌ಪತ್ತೆ ಆದ್ರೇ ಅಸಲಿಯೋ ನಕಲಿಯೋ ಅನ್ನೋ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net