ಕಳವು ಆರೋಪಿಗಳ ಬಂಧನ

8 budikote 3
Published on

ಬೂದಿಕೋಟೆ: ಕಾಮಸಮುದ್ರ ಪೊಲೀಸ್​ ಠಾಣೆ ವ್ಯಾಪ್ತಿಯ ದೇವಾಲಯ ಮತ್ತು ಮನೆ ಕಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 34 ಗ್ರಾಂ ಚಿನ್ನಾಭರಣ ಮತ್ತು 380 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿಮ್ಮಕಂಪಲ್ಲಿ ಗ್ರಾಮದ ಕೆ.ಚಿನ್ನಸ್ವಾಮಿ (57), ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಗ್ರಾಮದ ಮಣಿ ಬಾಬು (55) ಬಂಧಿತರು.

ತಾಲೂಕಿನ ಕುಂದರಸನಹಳ್ಳಿಯ ಹೊರವಲಯದಲ್ಲಿರುವ ಕಾಳಿಕಾಂಭ ದೇವಸ್ಥಾನ ಹಾಗೂ ದೋಣಿಮಡಗು ಗ್ರಾಮದ ಸತೀಶ್​ರೆಡ್ಡಿ, ಸೀನಪ್ಪ ಕೊಂಗರಹಳ್ಳಿಯ ವೆಂಕಟೇಶಪ್ಪ, ಮುನಿಯಮ್ಮ, ಶೇಖ್​ ಲಿಯಾಕತ್​ ಮತ್ತು ಗೌರಮ್ಮ ಅವರ ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿತ್ತು. ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಡಿವೈಎಸ್​ಪಿ ಎಸ್​.ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮತ್ತು ಪಿಎಸ್​ಐ ಕಿರಣ್​ಕುಮಾರ್​ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆದಳ ರಚಿಸಲಾಗಿತ್ತು.

ಕಾಮಸಮುದ್ರಂ ಪಿಎಸ್​ಐ ಬಿ.ವಿ.ಕಿರಣ್​ ಕುಮಾರ್​, ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿ ಮಂಜುನಾಥರೆಡ್ಡಿ, ಮುನಾವರ್​ಪಾಷಾ, ರಾಮರಾವ್​, ರಾಮಕೃಷ್ಣಾರೆಡ್ಡಿ, ಮಂಜುನಾಥ, ಮಾಕೊಂರ್ಡ, ಲಕ್ಷ$್ಮಣತೇಲಿ ಹಾಗೂ ಜೀಪ್​ಚಾಲಕ ಗುರುಮೂರ್ತಿ ಅವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​ ಅವರು ಪ್ರಶಂಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net