

ಮಂಗಳೂರು: ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕಳವಾದ 2.90 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಿ ನ್ಯಾಯಾಲಯದ ಅನುಮತಿ ಪಡೆದು ಮಾಲೀಕರಿಗೆ ಗುರುವಾರ ಹಸ್ತಾಂತರ ಮಾಡಲಾಯಿತು.
ವಿವಿಧ ಠಾಣೆಗಳಿಗೆ ಸಂಬಂಧಿಸಿದ ಚಿನ್ನಾಭರಣ, ವಾಹನ,ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮುಖ್ಯ ಅತಿಥಿಯಾಗಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಬಿ.ಪಿ.ದಿನೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ನೂರಾರು ಮಂದಿ ಆಗಮಿಸಿ ತಮ್ಮ ವಸ್ತುಗಳನ್ನು ಪಡೆದುಕೊಂಡು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.
ವಿಮೆ ಕಂತು ಕಟ್ಟದೆ ಬೈಕ್ ಚಲಾಯಿಸಿ ಅಪಘಾತ ನಡೆದು ಇಬ್ಬರು ಮೃತಪಟ್ಟ ಬೈಕನ್ನು ಹರಾಜಿಗೆ ಇಡಲಾಗಿತ್ತು. ವಿಮೆ ಇಲ್ಲದ ವಾಹನ ಚಾಲನೆ ಸರಿಯಲ್ಲ ಎನ್ನುವ ಸಂದೇಶ ಇಲ್ಲಿ ಸಾರಲಾಗಿತ್ತು.