ಶೌರ್ಯ ಸಾಹಸ ಮೆರೆದ ಗೂರ್ಖಾ

VJP_Kuntoji
Published on

ಮುದ್ದೇಬಿಹಾಳ: ಪಟ್ಟಣದ ವ್ಯಾಪಾರಸ್ಥರ ಅಂಗಡಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗೂರ್ಖಾ ಶೇರ್ ಬಹದ್ದೂರನ ಶೌರ್ಯ ಸಾಹಸ ಅಭಿನಂದನೀಯ ಎಂದು ಕುಂಟೋಜಿ ಸಂಸ್ಥಾನ ಮಠದ ಚನ್ನವೀರ ಸ್ವಾಮೀಜಿ ಹೇಳಿದರು.

ಕುಂಟೋಜಿ ಶ್ರೀಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶೇರ್ ಬಹದ್ದೂರ್ ಅವರನ್ನು ಸನ್ಮಾನಿಸಿ, ಬಹುಮಾನ ನೀಡಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ರಾತ್ರಿ ಕಾವಲು ಕಾದು, ಕಳ್ಳಕಾಕರಿಂದ ಸಂರಕ್ಷಿಸುವ ಇಂಥಹ ಪ್ರಾಮಾಣಿಕ ಸಿಪಾಯಿಗೆ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಶಿಸಿದರು.

ತಾಲೂಕಿನ ಗಣ್ಯರು ಬಹುಮಾನ ರೂಪದಲ್ಲಿ ಧನ ಸಹಾಯ ಮಾಡಿದರು. ಮಸಬಿನಾಳ ವಿರಕ್ತಮಠದ ಸಿದ್ದರಾಮ ಮಹಾಸ್ವಾಮಿಗಳು, ಇಟಗಿಯ ಗುರುಶಾಂತ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಹಾಂತೇಶ ಬೂದಿಹಾಳಮಠ ಡಾ. ರಾಜಶೇಖರ ಚಿರಚನಕಲ್ಲ, ಮಂಜುನಾಥ ಕೊಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net