ನರಸಾಪುರದಲ್ಲಿ ಶ್ರೀಗಂಧದ ಮರಗಳ ಕಳವು

FotoJet
Published on

ವೇಮಗಲ್; ​ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ ಸುಮಾರು 30 ಶ್ರೀಗಂಧದ ಮರಗಳನ್ನು ಶನಿವಾರ ರಾತ್ರೋರಾತ್ರಿ ಕಡಿದು, ಕಳವು ಮಾಡಿದ್ದಾರೆ.

ಮಲ್ಲಸಂದ್ರ ಗ್ರಾಮದ ಬಚ್ಚಣ್ಣ ಅವರ 3.12 ಎಕರೆ ಜಮೀನಿನಲ್ಲಿ 1,200 ಶ್ರೀಗಂಧ ಬೆಳೆದಿದ್ದು, ಮರಗಳ ರಕ್ಷಣೆಗಾಗಿ ವಿದ್ಯುತ್​ ತಂತಿ ಬೇಲಿ, ಸಿಸಿಟಿವಿ ಅಳವಡಿಸಿದ್ದರು. ಆದರೂ ತೋಟದ ಮೂರ್ನಾಲ್ಕು ಕಡೆ ವಿದ್ಯುತ್​ ತಂತಿ ಬೇಲಿ ಕತ್ತರಿಸಿ ಒಳನುಗ್ಗಿ ಕೃತ್ಯ ಎಸಗಿದ್ದಾರೆ. ಈ ಹಿಂದೆಯೂ ಮೂರ್ನಾಲ್ಕು ಬಾರಿ ಬಚ್ಚಣ್ಣ ಅವರ ತೋಟದಲ್ಲಿ ಮರಗಳು ಕಳುವಾಗಿವೆ ಎನ್ನಲಾಗಿದೆ. ವೇಮಗಲ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net