ಚಿನ್ನಾಭರಣ, ನಗದು ಕಳವು

Harpanahalli gold theft
Published on

ಭಟ್ಕಳ: ಪಟ್ಟಣದ ವಿ.ಟಿ. ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬೆಲೆಬಾಳುವ ಆಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಸೋನಾರಕೇರಿಯ ವಿ.ಟಿ. ರಸ್ತೆಯಲ್ಲಿರುವ ರಾಘವೇಂದ್ರ ಭಾಸ್ಕರ ಶೇಟ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳ ನುಗ್ಗಿದ ಕಳ್ಳರು, ಅಲ್ಮೇರಾ ಒಡೆದು ಅದರಲ್ಲಿದ್ದ 1.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 7500 ರೂ. ಮೌಲ್ಯದ ಬೆಳ್ಳಿ ಹಾಗೂ 15 ಸಾವಿರ ನಗದು ದೋಚಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖಾಧಿಕಾರಿ ಯಲ್ಲಪ್ಪ ಮಾದರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net