ಮನೆ ಬೀಗ ಒಡೆದು ಚಿನ್ನಾಭರಣ ಕಳವು

30blrp4
ಬೇಲೂರು ಪಟ್ಟಣದ ಚನ್ನಕೇಶವೇಗೌಡರ ಬೀದಿಯಲ್ಲಿ ವಾಸವಾಗಿರುವ ಬಿ.ಎಂ.ಆನಂದ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆಯುತ್ತಿರುವ ಪೊಲೀಸರು
Published on

ಬೇಲೂರು: ಪಟ್ಟಣದ ಚನ್ನಕೇಶವೇಗೌಡರ ಬೀದಿಯ ಬಿ.ಎಂ.ಆನಂದ ಕುಮಾರ್ ಎಂಬುವವರ ಮನೆಯ ಬೀಗ ಒಡೆದು ನಗದು ಸೇರಿದಂತೆ ಚಿನ್ನಾಭರಣ ಕಳವು ಮಾಡಿದ್ದು, ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

ಪಟ್ಟಣದ ಚನ್ನಕೇಶವೇಗೌಡರ ಬೀದಿಯ ಬಿ.ಎಂ.ಆನಂದ್ ಕುಮಾರ್ ಸೋಮವಾರ ಮನೆಗೆ ಬೀಗ ಹಾಕಿಕೊಂಡು ಪತ್ನಿಯ ಊರಾದ ಚಿಕ್ಕಮಗಳೂರಿಗೆ ತೆರಳಿದ್ದರು. ಭಾನುವಾರ ವಾಪಸ್ ಬಂದಾಗ ಕಳ್ಳತನವಾಗಿರುವುದು ತಿಳಿದಿದೆ. ಕಳ್ಳರು ಬೀರುವಿನ ಬಾಗಿಲು ಮುರಿದು 150 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಹಾಗೂ 8 ಸಾವಿರ ನಗದು ಕಳವು ಮಾಡಿದ್ದಾರೆ. ಬೇಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕ ಜಯರಾಂ, ಸಬ್‌ಇನ್ಸ್‌ಪೆಕ್ಟರ್ ವಿರೂಪಾಕ್ಷ ಹಾಗೂ ಸಿಬ್ಬಂದಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net