ಲಕ್ಷಾಂತರ ರೂ., ಚಿನ್ನಾಭರಣ ಕಳವು

Kottur theft
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಠದಲ್ಲಿ ಪೌರೋಹಿತ್ಯ ಕೆಲಸ ಮಾಡುತ್ತಿರುವ ಕುಲ್ಕುಂದ ಪ್ರವೀಣ್ ಕುಮಾರ್ ಅವರ ಮನೆ ಕಪಾಟಿನಲ್ಲಿ ಪೂಜಾ ಕಾರ್ಯಕ್ರಮಕ್ಕೆಂದು ಇರಿಸಿದ್ದ 18 ಲಕ್ಷ ರೂ. ಮತ್ತು 13.65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಆ.6ರಂದು ಕಳವಾಗಿದೆ ಎಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರು, ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net