ಚನ್ನಪಟ್ಟಣ: ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಬಳಕೆಗೆ ಅಳವಡಿಸಲಾಗಿದ್ದ ಆಮ್ಲಜನಕ ಪ್ಲಾಂಟ್‌ನಿಂದ ವಾರ್ಡ್‌ಗಳಿಗೆ ಅಳವಡಿಸಲಾಗಿದ್ದ ಆಮ್ಲಜನಕ ಸರಬರಾಜು ತಾಮ್ರದ ಪೈಪ್‌ಗಳನ್ನು ಕಳವು ಮಾಡಿರುವ ಘಟಕೆ ನಡೆದಿದೆ. ಶಸ್ತ್ರಚಿಕಿತ್ಸೆಯ ವೇಳೆ ಮತ್ತು ನಂತರದ ಚಿಕಿತ್ಸೆಗಳಿಗಾಗಿ ಹಾಗೂ ಉಸಿರಾಟದ ಸಮಸ್ಯೆ ಇರುವ ರೋಗಿಗಳ ಉಪಯೋಗಕ್ಕಾಗಿ ಸರ್ಕಾರದಿಂದ ಲಕ್ಷಾಂತರ ರೂ. ಖರ್ಚು ವೆಚ್ಚ ಮಾಡಿ ಆಸ್ಪತ್ರೆಯ ಹೊರ ಆವರಣದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಆದರೆ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ರಾತ್ರಿ ವೇಳೆ ಆಸ್ಪತ್ರೆ ಆವರಣಕ್ಕೆ ನುಗ್ಗಿರುವ ಕಳ್ಳರು ಪೈಪ್‌ಗಳನ್ನು ಕತ್ತರಿಸಿ ತೆಗೆದು ಹೋಗಿದ್ದಾರೆ. ಈ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದೆ. ಈ ಸಂಬಂಧ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಪ್ಪಿದ ಅನಾಹುತ : ರೋಗಿಗಳ ಸಂಖ್ಯೆ ಕಡಿಮೆ ಹಿನ್ನೆಲೆಯಲ್ಲಿ ಜೀವ ಹಾನಿ ತಪ್ಪಿದೆ. ತೀವ್ರ ನಿಗಾ ಘಟಕದಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದ್ದು ಜತೆಗೆ ಆಸ್ಪತ್ರೆಯಲ್ಲಿನ ಆಮ್ಲಜನಕ ಪ್ಲಾಂಟ್ ನಿಂದ ಸರಬರಾಜು ಆಗುವ ಆಕ್ಸಿಜನ್ ಅನ್ನು ಕತ್ತರಿಸಿಸುವ ಸಮಯದಲ್ಲಿ ನಿಷ್ಕೀಯ ಮಾಡಿದ್ದ ಕಾರಣ ಜಿವ ಹಾನಿ ತಪ್ಪಿದೆ.