

ಮೈಸೂರು: ದೇವರಾಜ ಮೊಹಲ್ಲಾದ ಕೊತ್ವಾಲ್ ರಾಮಯ್ಯ ರಸ್ತೆಯಲ್ಲಿರುವ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು 1.25 ಲಕ್ಷ ರೂ. ನಗದು ಸೇರಿದಂತೆ 110 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಬಡಾವಣೆ ನಿವಾಸಿ ಭಾಗ್ಯಮ್ಮ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.
ಭಾಗ್ಯಮ್ಮ ಸೋಮವಾರ ಪ್ರವಾಸಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ ಪುತ್ರ ರಾಜೇಂದ್ರ ಮನೆ ಬಾಗಿಲ ಬಳಿ ಇದ್ದ ಹಾಲಿನ ಪ್ಯಾಕೆಟ್ ತೆಗೆದುಕೊಳ್ಳಲು ಬಂದಾಗ ಮನೆ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಬಳಿಕ ಪ್ರವಾಸದಲ್ಲಿದ್ದ ತಾಯಿಗೆ ವಿಷಯ ತಿಳಿಸಿದ್ದಾರೆ. ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.