

ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಖಾಸಗಿ ಸಂಸ್ಥೆಯೊಂದು ನಿಲ್ಲಿಸಿದ್ದ ಮೂರು ಕ್ರೇನ್ಗಳಿಂದ ಕಳ್ಳರು ಬ್ಯಾಟರಿ ಎಗರಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಕೈಕುಂಜೆ ಕನ್ನಡ ಭವನ ಬಳಿ ಗಜಲಕ್ಷ್ಮಿ ಸಂಸ್ಥೆಗೆ ಸೇರಿದ ಮೂರು ಕ್ರೇನ್ಗಳನ್ನು ಬುಧವಾರ ರಾತ್ರಿ ಎಂದಿನಂತೆ ಚಾಲಕರು ನಿಲ್ಲಿಸಿ ಮನೆಗೆ ತೆರಳಿದ್ದರು. ಗುರುವಾರ ಬಂದು ನೋಡಿದಾಗ ಕ್ರೇನ್ ಬಾಗಿಲು ಮುರಿದು ಬ್ಯಾಟರಿ ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಬಿ.ಸಿ.ರೋಡು ನಗರ ಠಾಣೆ ಪೊಲೀಸರ ವಸತಿಗೃಹ ಸಮೀಪದಲ್ಲೇ ಕಳ್ಳರು ಕೈಚಳಕ ತೋರಿಸಿ ಅಚ್ಚರಿ ಮೂಡಿಸಿದ್ದಾರೆ.