ಡಿಯೋ ಫಾಲೋ ಮಾಡ್ಕೊಂಡು ಬಂದು 7 ಲಕ್ಷ ರೂ. ಎಗರಿಸಿ ಪರಾರಿಯಾದ ಕಳ್ಳರು!

Dio
Published on

ಚಿಕ್ಕಬಳ್ಳಾಫುರ: ಡಿಯೋ ಫಾಲೋ ಮಾಡಿಕೊಂಡು ಬಂದ ಕಳ್ಳರು ಅದರೊಳಗಿಟ್ಟಿದ್ದ 7 ಲಕ್ಷ ರೂಪಾಯಿ ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಚಿಕ್ಕಬಳ್ಳಾಪುರದ ಸಂತೆ ಮಾರ್ಕೆಟ್​ನಲ್ಲಿ ಈ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರದ ನಂದಿ ಗ್ರಾಮದ ಮಂಜುನಾಥ್ ಎನ್ನುವವರು ಹಣ ಕಳೆದುಕೊಂಡವರು. ಬ್ಯಾಂಕ್​ನಿಂದ 7 ಲಕ್ಷ ರೂ. ಪಡೆದ ಮಂಜುನಾಥ್​ ರೇಷನ್ ತೆಗೆದುಕೊಳ್ಳಲು ಸಂತೆ ಮಾರ್ಕೆಟ್​ಗೆ ಬಂದಿದ್ದರು. ಆಗ ಅವರ ದ್ವಿಚಕ್ರ ವಾಹನ ಡಿಯೋವನ್ನು ಕಳ್ಳರು ಫಾಲೋ ಮಾಡಿಕೊಂಡು ಬಂದಿದ್ದರು. ಅವರು ತಮ್ಮ ವಾಹನ ನಿಲ್ಲಿಸಿ ಅಂಗಡಿಗೆ ಹೋಗುತ್ತಿದ್ದಂತೆ ಇತ್ತ ಕಳ್ಳರು ಕೈಚಳಕ ತೋರಿ, ಅಲ್ಲಿ ಇರಿಸಿದ್ದ 7 ಲಕ್ಷ ರೂ. ಕದ್ದುಕೊಂಡು ಪರಾರಿಯಾಗಿದ್ದಾರೆ.

ಕಳ್ಳರು ಡಿಯೋದಲ್ಲಿ ಹಣ ಎಗರಿಸುತ್ತಿದ್ದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net