ಲಗ್ನ ಪತ್ರಿಕೆ ಕೊಡುವ ಹೆಸರಿನಲ್ಲಿ ಕಳ್ಳತನ, ಇಬ್ಬರು ಐನಾತಿ ಕಳ್ಳಿಯರ ಬಂಧನ

IMG_20250228_212821.jpg
Published on

ಚಿಕ್ಕಬಳ್ಳಾಪುರ: ಲಗ್ನಪತ್ರಿಕೆ ವಿತರಣೆಯ ಹೆಸರಿನಲ್ಲಿ ಮನೆಯೊಳಗೆ ಹೋಗಿ ವೃದ್ಧೆಯಿಂದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರ ಬಂಧಿಸಿದ್ದಾರೆ.
ನಗರದ ಗಂಗನಮಿದ್ದೆಯ ಮಂಜುಳಾ (47)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ನಗರದ ಕಾಂಚನಾ( 47) ಬಂಧಿತರು. ಆರೋಪಿಗಳಿಂದ ಮಾಂಗಲ್ಯ ಸರ, ಬಂಗಾರದ ಚೈನು, ಕಿವಿಯೋಲೆ ಸೇರಿದಂತೆ 9 ಲಕ್ಷ ರೂ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

*ಮನೆಯಲ್ಲಿ ಕಟ್ಟಿ ಸುಲಿಗೆ*
ನಗರದ ಒಎಂಬಿ ರಸ್ತೆಯಲ್ಲಿನ ಮನೆಯಲ್ಲಿ ಗೌರಮ್ಮ (84) ಒಬ್ಬಂಟಿಯಾಗಿದ್ದ ವೇಳೆ ಮಂಜುಳಾ ಹಾಗೂ ಕಾಂಚನಾ ಲಗ್ನಪತ್ರಿಕೆ ನೀಡಲು ಬಂದಿರುವುದಾಗಿ ಹೇಳಿ ಮನೆ ಪ್ರವೇಶಿಸಿದ್ದಾರೆ. ಹಾಗೆಯೇ ಮಾತನಾಡುತ್ತ ವೃದ್ಧೆಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಕಿರುಚದಿರಲು ಬಾಯಿಗೆ ಕಟ್ಟಿ ತುರುಕಿದ್ದಾರೆ. ಬಳಿಕ ವೃದ್ಧೆಯ ಮೈ ಮೇಲಿನ ಒಡವೆಗಳ ಜತೆಗೆ ಬೀರುವಿನಲ್ಲಿದ್ದ ಆಭರಣಗಳ ತೆಗೆದುಕೊಂಡು ಪರಾರಿಯಾಗಿದ್ದು ಇದರ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಭೇದಿಸಲು ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನಲ್ಲಿ ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್ಐ ಗುಣವತಿ, ಸಿಬ್ಬಂದಿ ರವಿಕುಮಾರ್, ಪಕ್ಕೀರಜ್ಜ ಗೊಂದಿ, ಮಧುಸೂದನ್, ಲಕ್ಷ್ಮಣ್, ವಿಜಯ್ ಕುಮಾರ್, ಮುರಳಿ, ಪರಶುರಾಮ್, ರವೀಂದ್ರ, ಮುನಿಕೃಷ್ಣರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು. ಮನೆಯ ಸುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದ ತಂಡವು,  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net