

ಕೋಟ: ಕೋಟದ ಆನಂದ್ ಶೆಟ್ಟಿ ಮಾಲಿಕತ್ವದ ನಾಗರಾಜ್ ಮೆಟಲ್ ಶೋಪ್(ಗುಜರಿ ಅಂಗಡಿ) ನಲ್ಲಿ ಕಳವು ನಡೆದ ಘಟನೆ ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಗುಜರಿ ಗೋಡಾನ್ ನಲ್ಲಿದ್ದ ತಾಮ್ರ, ಅಲ್ಯೂಮಿನಿಯಂ, ಹಿತ್ತಾಳೆ, ಜನರೇಟರ್ ಇನ್ವಟರ್, ಸೇರಿದಂತೆ 80 ಸಾವಿರಕ್ಕೂ ಅಧಿಕ ಮೌಲ್ಯದ ಸಾಮಾಗ್ರಿಗಳು ಕಳ್ಳರ ಪಾಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿ, ತನಿಖೆ ನಡೆಸುತ್ತಿದ್ದಾರೆ.