ದುರ್ಗಾದೇವಿ ದೇಗುಲದಲ್ಲಿ ಕಳ್ಳತನ , ದೇವಿಯ ಸೀರೆಯನ್ನೂ ಬಿಡಿದ ಖದೀಮರು

18mnd1 - Temple
Published on

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಬೀಗ ಮುರಿದು ಹಣ, ಸೀರೆಗಳು ಹಾಗೂ ಧ್ವನಿವರ್ಧಕದ ಸೆಟ್ ಕಳ್ಳತನವಾದ ಘಟನೆ ಗುರುವಾರ ರಾತ್ರಿ ನಡೆದಿದೆ.


ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿದ್ದ ಎರಡು ಸಾವಿರ ರೂ. ನಗದು, ನಾಲ್ಕು ಸೀರೆಗಳು ಹಾಗೂ 15 ಸಾವಿರ ರೂ. ಮೌಲ್ಯದ ಧ್ವನಿವರ್ಧಕದ ಎಂಪ್ಲಿಪಾಯರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬೆಳಗ್ಗೆ ದೇವಸ್ಥಾನ ಬಾಗಿಲು ತೆಗೆಯಲು ಹೋದಾಗ ಕಳ್ಳತನವಾಗಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net