ಸಾಲೆತ್ತೂರಿನಲ್ಲಿ ಕಳ್ಳತನ - ಬೈಕ್, ನಗದು ದೋಚಿದ ಕಳ್ಳರು

Published on

ವಿಟ್ಲ: ಮನೆ ಅಂಗಳದಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್, ದಿನಸಿ ಅಂಗಡಿಯಿಂದ ನಗದು ದೋಚಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲೆತ್ತೂರಿನಲ್ಲಿ ಆ.16ರಾತ್ರಿ ಅಂಗಳದಲ್ಲಿ ನಿಲ್ಲಿಸಿದ್ದ ಸ್ಲೆಂಡರ್ ಬೈಕ್ ಕಳವು ಮಾಡಿದ್ದರು. ಆ.17 ಬೀಡಿ ಬ್ರಾಂಚ್ ಮತ್ತು ದಿನಸಿ ಅಂಗಡಿಯನ್ನು ಬೆಳಿಗ್ಗೆ ತೆರೆದ ಸಂದರ್ಭ ಛಾವಣಿಯ ಹಂಚು ತೆಗೆದು, ಅಂಗಡಿಯಲ್ಲಿದ್ದ 150 ರೂ ಮೌಲ್ಯದ ಬೇಕರಿ ತಿಂಡಿ ಹಾಗೂ 350 ರೂ ನಗದು ಕಳವು ಮಾಡಿರುವುದು ಕಂಡು ಬಂದ ಬಗ್ಗೆ ಸಾಲೆತ್ತೂರು ಬಂಟ್ವಾಳ‌ ನಿವಾಸಿ ರಾಮ ಶೆಟ್ಟಿಗಾರ್ (61) ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net