ಪೊಲೀಸ್​​ ಹೆಡ್​​ ಕಾನ್ಸ್​​ಟೆಬಲ್​ ಮನೆಯಲ್ಲೇ ಕಳ್ಳತನ ಮಾಡಿದ ಖದೀಮರು!

theft
Published on

ಬೆಂಗಳೂರು: ಕಳ್ಳಕಾಕರನ್ನು ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳುವ ಪೊಲೀಸರು ವಾಸಿಸುವ ಪೊಲೀಸ್​ ಕ್ವಾರ್ಟರ್ಸ್​ಗೇ ಕಳ್ಳರು ನುಗ್ಗಿ, ಪೊಲೀಸ್​ ಸಿಬ್ಬಂದಿಯೋರ್ವರ ಮನೆಯಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಶೇಷಾದ್ರಿಪುರದ ಆನಂದ್​​ರಾವ್ ಸರ್ಕಲ್​ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಈ ಕೃತ್ಯ ನಡೆದಿದೆ. ತಾವು ಡ್ಯೂಟಿಗೆ ತೆರಳಿದ್ದ ಸಮಯ ನೋಡಿಕೊಂಡು ಕಳ್ಳತನ ಮಾಡಿರುವ ಬಗ್ಗೆ ಹೆಡ್​ ಕಾನ್ಸ್​ಟಬಲ್ ಆದ ಮಾರುತಿ ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಸಿಸಿಟಿವಿ ಇಲ್ಲದೆ ಇರುವುದು ಕಳ್ಳರಿಗೆ ಬಂಡವಾಳವಾಗಿರಬಹುದು ಎನ್ನಲಾಗಿದೆ.

ಸೆ.27 ರಂದು 6 ಗಂಟೆಗೆ ಮನೆಯಿಂದ ಹೊರಟು ಭಾರತ್​ ಬಂದ್​ ಕರ್ತವ್ಯಕ್ಕೆ ಹಾಜರಾಗಿದ್ದ ಹೆಡ್​ಕಾನ್ಸ್​ಟೇಬಲ್​ ಸ್ನೇಹಿತನ ಮನೆಯಲ್ಲೇ ತಂಗಿದ್ದು, ಮರುದಿನ ಬಂದು ನೋಡಿದಾಗ ಮುಂಬಾಗಿಲ ಬೀಗ ಒಡೆದಿತ್ತು. ಒಳಗೆ ಹೋಗಿ ನೋಡಿದರೆ ಬೀರುವಿನಲ್ಲಿದ್ದ ಚಿನ್ನ-ಬೆಳ್ಳಿ, ವಾಚು, ಮೊಬೈಲು ಸೇರಿ 85 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net