ಬಾಗಿಲ ಕೊಂಡಿ ಮುರಿದು 1.48ಲಕ್ಷ ರೂ. ಕಳ್ಳತನ

Crime Logo
Published on

ಕಲಬುರಗಿ: ಶಹಾಬಾದ್​ ರಸ್ತೆಯಲ್ಲಿನ ಮನೆಯೊಂದರಲ್ಲಿ ೧.೪೮ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ನಾಗೇಂದ್ರ ಮಂಗನ್​ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಜೂ.೨೩ರಂದು ಮಧ್ಯಾಹ್ನ ೧೨.೩೦ಕ್ಕೆ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದಾರೆ. ಮಧ್ಯಾಹ್ನ ೧.೧೫ಕ್ಕೆ ವಾಪಸ್​ ಬಂದಾಗ ಬಾಗಿಲು ಮುರಿದಿದ್ದು, ಬೆಡ್​ರೂಮಿನಲ್ಲಿದ್ದ ಅಲಮಾರದಲ್ಲಿನ ಬಂಗಾರದ ಉಂಗುರ, ಲಾಕೆಟ್​, ಬೋರಮಳ, ಜುಮಕಿ, ಕಿವಿ ಸರಪಳಿ, ಬೆಳ್ಳಿ ಆರತಿ ಸೆಟ್​, ಬೆಳ್ಳಿ ಉಂಗುರು, ೧೮ ಸಾವಿರ ರೂ. ನಗದು ಸೇರಿ ಒಟ್ಟು ೧.೪೮ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net