ಬಿಗಿ ಭದ್ರತೆಯ ಕೈಗಾ ವಸತಿ ಸಂಕೀರ್ಣದಲ್ಲೇ ಕಳವು

Kaiga Town Ship
Published on

ಕಾರವಾರ: ಸಾಕಷ್ಟು ಭದ್ರತೆ ಇರುವ ಕೈಗಾ ಅಣು ಸ್ಥಾವರದ ವಸತಿ ಸಮುಚ್ಛಯದಲ್ಲಿಯೇ ಮನೆ ಕಳ್ಳತನವಾಗಿದೆ. ಕೈಗಾ ಉದ್ಯೋಗಿ ವಿ.ಗಣೇಶ ವೆಂಕಟಸುಬ್ಬಯ್ಯನ್ ಅವರಿಗೆ ಎನ್‌ಪಿಸಿಐಎಲ್‌ನಿಂದ ನೀಡಿದ ಕ್ವಾಟ್ರಸ್‌ನಲ್ಲಿ ಏ.20 ರಿಂದ 27 ರ ನಡುವೆ ನಗ, ನಗದು ಕಳ್ಳತನವಾಗಿದೆ. ಅವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಅವರ ಸಹೋದ್ಯೋಗಿ ಸಿ.ಎಸ್.ಹರೀಶ ಸಿದ್ದೇಗೌಡ ಎಂಬುವವರು ಏ.27 ರಂದು ಮಲ್ಲಾಪುರ ಠಾಣೆಗೆ ದೂರು ನೀಡಿದ್ದರು. ಆದರೆ, ಮೂಲ ಮಾಲೀಕರು ಹೊರ ಊರಿನಲ್ಲಿ ಇದ್ದುದರಿಂದ ಅವರು ಮಲ್ಲಾಪುರಕ್ಕೆ ಬಂದ ನಂತರ ಮೇ 8 ರಂದು ಹೇಳಿಕೆ ಪಡೆದು, ಎಫ್‌ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಮನೆಯಲ್ಲಿ ಒಟ್ಟು 4.03 ಲಕ್ಷ ರೂ. ಮೌಲ್ಯದ ಬಂಗಾರ, 42,225 ರೂ. ಮೌಲ್ಯದ ಬೆಳ್ಳಿ ಒಡವೆಗಳು, 56,115 ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net