ಇಳಕಲ್ಲನಲ್ಲಿ ಕಳ್ಳತನ

Theft in Ilakall
Published on

ಇಳಕಲ್ಲ (ಗ್ರಾ): ಪಟ್ಟಣದ ಹುಚನೂರ ನಾಗೂರ ರಸ್ತೆಯಲ್ಲಿನ ಶ್ರೀಸಾಯಿ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ಮಧ್ಯಾಹ್ನ ಚಿನ್ನ ಮತ್ತು ಹಣ ಕಳ್ಳತವಾಗಿದೆ.

ನಾಗಪ್ಪ ಸಂಗಮ ಎಂಬುವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಸುಮಾರು 120 ಗ್ರಾಂ ಬಂಗಾರ ಮತ್ತು 30 ಸಾವಿರ ರೂ. ಕಳ್ಳತನವಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net