ಮನೆಯಲ್ಲಿ ಕಳ್ಳತನ, ಆರೋಪಿ ಬಂಧನ

Theft case
ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯಿಂದ ಜಪ್ತಿ ಮಾಡಿದ ಚಿನ್ನಾಭರಣ ಮತ್ತು ಬೈಕ್.
Published on

ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಸಮೀಪದ ದೊಡ್ಡಮನೆ ಮತ್ತಿ ಕೈ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನುಬಂಧಿಸಿದ್ದು 1 ಲಕ್ಷ ರೂ.ಮೌಲ್ಯದ 12 ಗ್ರಾಂ ಚಿನ್ನದ ಸರ ಹಾಗೂ 65 ರೂ. ಮೌಲ್ಯದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಹೊಸನಗರ ತಾಲೂಕಿನ ಕಟ್ಟಿನಹೊಳೆ ಗ್ರಾಮದ ಕೆ.ಆರ್.ಶರತ್‌ಕುಮಾರ್ (26) ಬಂಧಿತ ಮನೆಗಳ್ಳ.

ಮೂಲತಃ ಚೀಪ್ ಚಾಲಕನಾಗಿರುವ ಶರತ್‌ಕುಮಾರ್, ಮಾ.3ರಂದು ದೊಡ್ಡಮನೆ ಮತ್ತಿಕೈ ಗ್ರಾಮದ ಎಂ.ಎಸ್.ಪರಮೇಶ್ವರ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ. ಪರಮೇಶ್ವರ ಅವರು ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದು ವಾಪಸ್ ಬಂದು ನೋಡಿದಾಗ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು.

ಬೆಡ್‌ರೂಮ್‌ನ ಕಪಾಟಿನಲ್ಲಿದ್ದ 12 ಗ್ರಾಂಚಿನ್ನದ ಸರ ಹಾಗೂ 15 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಎನ್. ಕಲಗುಚ್ಚಿ ಮೇಲ್ವಿಚಾರಣೆಯಲ್ಲಿ ಹೊಸನಗರ ಸಿಪಿಐ ಗುರಣ್ಣ ಹೆಬ್ಬಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರ ಪಿಎಸ್‌ಐ ವೈ.ಕೆ.ಶಿವಾನಂದ, ಎಎಸ್‌ಐಗಳಾದ ಟಿ.ಕುಮಾರ್, ಶೇಕ್ ಅಮೀರ್ ಜಾನ್, ಸಿಬ್ಬಂದಿಗಳಾದ ಕಿರಣ್, ವಿಶ್ವನಾಥ್, ಪ್ರವೀಣ್ ಕುಮಾರ್, ವಿಶ್ವನಾಥ್, ರವಿಚಂದ್ರ, ಸುಜಯ್ ಕುಮಾರ್, ಡಿ.ಎಸ್. ಪ್ರಜ್ವಲ್ ಮತ್ತು ಸಚಿನ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net