

ಹುಲಸೂರು: ಬೇಲೂರದ ಸರ್ಕಾರಿ ಪ್ರೌಢ ಶಾಲೆಯ ಅಡುಗೆ ಕೋಣೆಗೆ ನುಗ್ಗಿ ಅಕ್ಕಿ, ಗೋಧಿ ಚೀಲಗಳನ್ನು ಹೊತ್ತೊಯ್ದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಕಳ್ಳತನ ಮಾಡುವ ದೃಶ್ಯ ಶಾಲೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಲ್ಕು ಚಕ್ರದ ವಾಹನದಲ್ಲಿ ಕಳ್ಳರು ಬಂದಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಕಳ್ಳರು ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಶಾಲೆಯ ಅಡುಗೆ ಕೋಣೆಗೆ ಪ್ರವೇಶಿಸಿ, ಅಕ್ಕಿ ಮತ್ತು ಗೋಧಿ ಚೀಲ ಕಳ್ಳತನ ಮಾಡಿದ್ದು, ಈ ದೃಶ್ಯ ಸೆರೆಯಾಗಿದೆ. ಪಿಎಸ್‌ಐ ನಾಗೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.