ಭೋಗೇನಾಗರಕೊಪ್ಪದಲ್ಲಿ ಕಳ್ಳತನ, ಒಬ್ಬನ ಬಂಧನ

KLG ARREST
Published on

ಕಲಘಟಗಿ: ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಒಂದೇ ದಿನದಲ್ಲಿ ಕಲಘಟಗಿ ಪೊಲೀಸರು ಗುರುವಾರ ಬೇಧಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭೋಗೇನಾಗರಕೊಪ್ಪದ ಕಿರಣ ಯಲ್ಲಪ್ಪ ಮಾಡಲಗಿ ಬಂಧಿತ. ಚಳ್ಳಮಟ್ಟಿ ಕ್ರಾಸ್​ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ 70 ಸಾವಿರ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಭೋಗೇನಾಗರಕೊಪ್ಪ ಗ್ರಾಮದ ರವಿ ಸಣ್ಣಪೂಜಾರ ಎಂಬುವವರ ಮನೆಯ ಹಿತ್ತಲಿನ ಬಾಗಿಲು ಮುರಿದು ಮನೆಯಲ್ಲಿದ್ದ 1.15 ಲಕ್ಷ ರೂ. ಕಳ್ಳತನ ಮಾಡಿರುವ ಬಗ್ಗೆ ಕಲಘಟಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿಪಿಐ ಶ್ರೀಶೈಲ ಕೌಜಲಗಿ ಮಾರ್ಗದರ್ಶನದಲ್ಲಿ ಪಿಎಸ್​ಐ ಸಿ.ಎನ್. ಕರವೀರಪ್ಪನವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಮಹಾಂತೇಶ ನಾನಾಗೌಡ, ಪರಶುರಾಮ ಮಾಳಗೊಂಡ, ಗೋಪಾಲ ಪಿರಗಿ, ಹುಸೇನ ಎಲಿಗಾರ, ಪ್ರಕಾಶ ಗೂಳಪ್ಪಗೌಡ್ರ, ಶಿವಶರಣ ಕಚನೂರ, ಮಹಾದೇವ ನಿಡವಣೆ ಹಾಗೂ ಪ್ರವೀಣ ಅಂಗಡಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net