ಕೋಲಾರ:- ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ ಬೀಗ ಮುರಿದ ಚೋರರು ಎರಡು ಯುಪಿಎಸ್ ಹಾಗೂ ಎರಡು ಬ್ಯಾಟರಿ ಕಳುವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಶಾಲೆಯ 9ನೇ ತರಗತಿ ಕೊಠಡಿಯ ಬಾಗಿಲ ಚಿಲಕವನ್ನು ಗಡಾರಿಯಿಂದ ಮೀಟಿ ತುಂಡರಿಸಿದ್ದ ಕಳ್ಳರು ಅದರಲ್ಲಿದ್ದ ಸ್ಮಾರ್ಟ್ಕ್ಲಾಸ್ಗೆ ಬಳಸುತ್ತಿದ್ದ ಯುಪಿಎಸ್ ಹಾಗೂ ಬ್ಯಾಟರಿ ಕಳುವು ಮಾಡಿದ್ದರು.
ಇದಾದ ನಂತರ ಮಂಗಳವಾರ ರಾತ್ರಿ ಮತ್ತೊಮ್ಮ ಕೈಚಳಕ ತೋರಿಸಿದ್ದು, ಗ್ರಂಥಾಲಯದಲ್ಲಿ ಸ್ಮಾರ್ಟ್ ಕ್ಲಾಸ್ಗೆ ಬಳಸುತ್ತಿದ್ದ ಯುಪಿಎಸ್ ಹಾಗೂ ಬ್ಯಾಟರಿ ಕಳುವು ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ದಾನಿಗಳ ನೆರವಿನಿಂದ ಎಲ್ಲ ಕೊಠಡಿಗಳಿಗೂ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗಿದೆ. ಇದನ್ನು ಸಹಿಸದ ಚೋರರು ದುಷತ್ಯ ಎಸಗಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜು, ಬಿಇಒ ಉಮಾದೇವಿ, ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಸಿಆರ್ಪಿ ಬಸವರಾಜು ಭೇಟಿ ನೀಡಿದ್ದರು. ಈ ಸಂಬಂಧ ಗ್ರಾಮಾಂತರಠಾಣೆಗೆ ದೂರು ನೀಡಲಾಗಿದೆ.