ಗಂಟಗೌಡನಹಳ್ಳಿಯಲ್ಲಿ ದಿನಸಿ ಅಂಗಡಿಯಲ್ಲಿ ಕಳ್ಳತನ

WhatsApp Image 2022-09-21 at 12.37.09 PM
Published on

ಮಂಡ್ಯ: ತಾಲೂಕಿನ ಗಂಟಗೌಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದಿನಸಿ ಅಂಗಡಿಯ ಬೀಗ ಮುರಿದು ಸಾವಿರಾರೂ ರೂ ನಗದು ಹಾಗೂ ದಿನಸಿ ಪದಾರ್ಥವನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿದೆ.

ಗ್ರಾಮದ ವಿನಯ್‌ಕುಮಾರ್ ಎಂಬುವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ಬೀಗ ಮುರಿದು ಹಾಗೂ ಅಂಗಡಿ ಮೇಲಿನ ಸೀಟ್ ತೆಗೆದು ಒಳ್ಳ ನುಗ್ಗಿರುವ ದುಷ್ಕರ್ಮಿಗಳು 40 ಸಾವಿರ ರೂ ನಗದು ಹಾಗೂ ದಿನಸಿ ಪದಾರ್ಥವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೆರಗೊಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net