

ಕನಕಗಿರಿ: ಸಹೋದರನ ಮದುವೆ ಸಂಭ್ರಮದಲ್ಲಿದ್ದ ಪಟ್ಟಣದ 17ನೇ ವಾರ್ಡ್‌ನ ಪಪಂ ಸದಸ್ಯ ಹನುಮಂತ ಬಸರಿಗಿಡರ ಮೊಬೈಲ್ ಕದ್ದಿದ್ದ ಖದೀಮರು 2 ಕಿಮೀ ದೂರದ ಸ್ಮಶಾನದಲ್ಲಿ ಎಸೆದಿದ್ದು, ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ. ಹನುಮಂತ ಬಸರಿಗಿಡರ ಸಹೋದರನ ಮದುವೆ ಸಪ್ತಪದಿ ಕಾರ್ಯಕ್ರಮದಲ್ಲಾಗಿದ್ದು, 7ನೇ ವಾರ್ಡ್‌ನ ಮನೆಯ ಮುಂದೆ ಅತಿಥಿಗಳಿಗೆ ಊಟದ ವ್ಯವಸ್ಥೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾಗ ಮೊಬೈಲ್ ಕಳವಾಗಿದೆ. ಕಳ್ಳರು ಇಂದಿರಾ ಕ್ಯಾಂಪ್ ಬಳಿ ಇರುವ ಸ್ಮಶಾನದಲ್ಲಿ ಎಸೆದು ಹೋಗಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿದು ಲೊಕೇಶನ್ ಹಾಕಿದ್ದು, ಸ್ಮಶಾನದಲ್ಲಿ ಮೊಬೈಲ್ ಸುಳಿವು ಸಿಕ್ಕಿದರಿಂದ ಪೊಲೀಸರು ಹಾಗೂ ಹಲವರು ಹುಡುಕಾಟ ನಡೆಸಿದ್ದು, ಮುಳ್ಳಿನ ಪೊದೆಯಲ್ಲಿ ಮೊಬೈಲ್ ಸಿಕ್ಕಿದೆ. ಏನಾಗಿದೆ ಎಂದು ಜನ ಗಾಬರಿಯಿಂದ ರಸ್ತೆಯಲ್ಲಿ ನಿಂತು ನೋಡುತ್ತಿದ್ದರು.