ಕಳ್ಳತನಕ್ಕೆ ಕಡಿವಾಣ ಹಾಕಲು ಜಾಥಾ

020522 Kudatini Police Dept Awarness Programmee
ಕುರುಗೋಡು ಸಮೀಪದ ಕುಡತಿನಿಯಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಿದ ಪೊಲೀಸರು,
Published on

ಕುರುಗೋಡು: ಹೆಚ್ಚುತ್ತಿರುವ ಕಳ್ಳತನಕ್ಕೆ ಕಡಿವಾಣ ಹಾಕಲು ತಾಲೂಕು ಕುಡತಿನಿ ಪಟ್ಟಣದ ಎಲ್ಲ 19 ವಾರ್ಡ್‌ಗಳಲ್ಲಿ ಪೊಲೀಸರು ಸೋಮವಾರ ಜಾಗೃತಿ ಜಾಥಾ ನಡೆಸಿದರು.

ಪಿಎಸ್‌ಐ ಅಮರೇಗೌಡ ಮಾತನಾಡಿ, ಕುಡತಿನಿ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು. ವಿಶೇಷವಾಗಿ ಊರಿಗೆ ಹೋಗುವಾಗ ಬಂಗಾರ, ಬೆಳ್ಳಿ, ಹಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿಡದೇ ಬ್ಯಾಂಕ್‌ಗಳ ಸೇಫ್ ಲಾಕರ್‌ನಲ್ಲಿಡಬೇಕು. ಊರಿಗೆ ತೆರಳುವಾಗ ಮನೆಯ ಮುಂಭಾಗದಲ್ಲಿ ಬೆಳೆಕಿನ ವ್ಯವಸ್ಥೆ ಮಾಡಬೇಕು. ನೆರೆಯ ಮನೆಯವರಿಗೆ ಮಾಹಿತಿ ತಿಳಿಸಬೇಕು ಎಂದು ಸಲಹೆ ನೀಡಿದರು.

ಸಾಧ್ಯವಾದವರು ಸಿಸಿಟಿವಿ ಅಳವಡಿಸಿಕೊಳ್ಳಬಹುದು. ತಮ್ಮ ವಾರ್ಡ್‌ಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕು. ಭಿಕ್ಷುಕರು, ಬೀಗ, ಮಿಕ್ಸಿ, ಜಿಪ್ ಮತ್ತಿತರ ಸಾಮಗ್ರಿ ದುರಸ್ತಿ ಮಾಡುವ ಅಥವಾ ಮಾರಾಟ ಮಾಡಲು ಬರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net