ಕಳವು ಸಾಮಗ್ರಿ ಮಾರಾಟಕ್ಕೆ ಯತ್ನ ಆರೋಪಿ ಬಂಧನ

mng--26 Aug Mohammad ilyas
Published on

ಮಂಗಳೂರು: ಕಳವು ಮಾಡಿದ್ದ ಸೆಂಟ್ರಿಂಗ್ ಕಬ್ಬಿಣದ ಶೀಟ್ ಮತ್ತು 3 ಸೆಟ್ ಕಬ್ಬಿಣದ ಕಾಲಂ ಬಾಕ್ಸ್‌ಗಳನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಓರ್ವ ಬಂಧನವಾಗಿ, ಇಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ.


ತೋಡಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ (23) ಬಂಧಿತ. ಮೊಹಮ್ಮದ್ ಸಾಹಿಲ್ ಮತ್ತು ಹಂಝ ಪರಾರಿಯಾಗಿದ್ದಾರೆ.


ಉಳ್ಳಾಲ ಪಿಎಸ್‌ಐ ಸಂತೋಷ್ ಕುಮಾರ್ ಅವರು ಗಸ್ತು ತಿರುಗುತ್ತಿದ್ದಾಗ ಪಿಲಿಕೂರು ಕಡೆಯಿಂದ ಕೆ.ಸಿ.ರೋಡ್ ಕಡೆಗೆ ಬಂದ ಪಿಕಪ್ ಹಾಗೂ ರಿಟ್ಜ್ ಕಾರನ್ನು ಅನುಮಾನದಿಂದ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಳವು ಸಾಮಗ್ರಿ ಪತ್ತೆಯಾಗಿದೆ. ಈ ಸಂದರ್ಭ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಿಸಿದಾಗ ಆ.7ರಂದು ಕೊಲ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಎದುರಿನಿಂದ ಹಾಗೂ ಕಬ್ಬಿಣದ ಕಾಲಂ ಬಾಕ್ಸ್‌ಗಳನ್ನು ಸುಮಾರು ಒಂದೂವರೆ ತಿಂಗಳ ಹಿಂದೆ ಪರನೀರು ಎಂಬಲ್ಲಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅದನ್ನು ಕೂಡಲೇ ಮಾರಾಟ ಮಾಡಿದರೆ ಸಿಕ್ಕಿ ಬೀಳಬಹುದೆಂದು ಪಿಲಿಕೂರಿನ ನಿರ್ಜನ ಪ್ರದೇಶದಲ್ಲಿಡಲಾಗಿತ್ತು. ಈಗ ಮಾರಾಟ ಮಾಡಲು ಹೊರಟಿದ್ದೆವು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ 120 ಕಬ್ಬಿಣದ ಸೆಂಟ್ರಿಂಗ್ ಶೀಟ್, 1.25 ಲಕ್ಷ ರೂ. ಮೌಲ್ಯದ 3 ಸೆಟ್ ಕಬ್ಬಿಣದ ಕಾಲಂ, 3 ಲಕ್ಷ ರೂ. ಮೌಲ್ಯದ ಪಿಕಪ್, 3 ಲಕ್ಷ ರೂ. ಮೌಲ್ಯದ ರಿಟ್ಜ್ ಕಾರು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net